ಬೆಂಗಳೂರು : ಬೆಂಗಳೂರು ನಗರ ಜಿಲ್ಲೆ-5 ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಇವರ ಮಾರ್ಗದರ್ಶನದಲ್ಲಿ ಉಪವಿಭಾಗ-10 ಉಪ ಅಧೀಕ್ಷಕರಾದ ದೇವರಾಜ್ ಅಬಕಾರಿ ಇವರ ನೇತೃತ್ವದಲ್ಲಿ ಹಾಗೂ ಅಬಕಾರಿ ನಿರೀಕ್ಷಕರಾದ ಅಬುಬಕರ್ ಮುಜಾವರ ಮತ್ತು ಅಬಕಾರಿ ಸಿಬಂದ್ದಿಗಳೊಂದಿಗೆ ಮಹದೇವಪುರ ವ್ಯಾಪ್ತಿಯ ದೂರವಾಣಿನಗರದ ಬಿ.ಎಂ.ಟಿ.ಸಿ. ಕಾರ್ಯಾಗಾರದ ಹತ್ತಿರ ಅಬಕಾರಿ ಇಲಾಖೆ ದಾಳಿ ನಡೆಸಿ, ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 2.300 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಂಡು ಆರೋಪಿಗಳಾದ ಉತ್ತರಪ್ರದೇಶದ ತೇಜುಸಿಂಗ್ ಕೋಂ ಜಯದೇವಸಿಂಗ್ ಎಂಬುವವರನ್ನು ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆ-1985 ರಡಿ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ-5 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.