ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧ ಶಂಕಿಸಿ ಪತಿಯೇ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜೆ.ಪಿ ನಗರದಲ್ಲಿ ಕಳೆದ ಭಾನುವಾರ(ಮಾ.31) ನಡೆದಿದೆ.
ಹೆಚ್ ಎಸ್ ಆರ್ ಲೇಔಟ್ ನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಮಹಿಳೆ, ಕಚೇರಿ ಕೆಲಸದ ವಿಚಾರವಾಗಿ ತನ್ನ ಸಹೋದ್ಯೋಗಿಯನ್ನು ಮನೆಗೆ ಕರೆಸಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಹೊರಗಡೆಯಿಂದ ಮನೆಗೆ ಬಂದ ಪತಿಗೆ ಶಾಕ್ ಆಗಿದ್ದು, ಪರಪುರಷನ ಜೊತೆ ಪತ್ನಿ ಕಂಡು ಅನುಮಾನದ ಹಿನ್ನಲೆ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾನೆ.
ಇನ್ನು ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇಬ್ಬರಿಗೂ ಅಕ್ರಮ ಸಂಬಂಧ ಶಂಕೆ ಹಿನ್ನಲೆ ಕತ್ತರಿ ಮತ್ತು ಚಾಕುವಿನಿಂದ ಹಲ್ಲೆಗೊಳಿಸಿದ್ದಾನೆ. ಹಲ್ಲೆಗೊಳಗಾದ ಮಹಿಳೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.