ವರದಿ: ಸ್ಟೀಫನ್ ಜೇಮ್ಸ್.
ಬೆಳಗಾವಿ: ಅಕ್ರಮ ಸಂಬಂಧಕ್ಕೆ ಹೆಂಡತಿಯ ಪ್ರಿಯಕರ ಮಹಾಂತೇಶ ಬುಕನಟ್ಟಿಯ ಹುಕ್ಕೇರಿ ತಾಲೂಕಿನ ಶಹಾಬಂದನಲ್ಲಿ ಕೊಲೆ ಮಾಡಿದ್ದ ಆರೋಪಿ ಬಸವರಾಜ ಬುಕನಟ್ಟಿ ಚಿಕ್ಕೋಡಿಯಲ್ಲಿ ತನ್ನ ಪತ್ನಿಗೆ ಕೊಲೆ ಮಾಡಲು ಸಂಚು ರೂಪಿಸಿದ್ದಾಗ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಹಾಬಂದರ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಸಮಯ ಪ್ರಜ್ಞೆಯಿಂದ ಹೆಂಡತಿಯ ಜೀವ ಉಳಿದಿದೆ. ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನ ಕೊಲೆ ಮಾಡಿದ್ದ ಪತಿ.
ಮಹಾಂತೇಶ್ ಬುಕನಟ್ಟಿ(24)ಕೊಲೆ ಮಾಡಿದ್ದ ಆರೋಪಿ ಬಸವರಾಜ್ ಬುಕನಟ್ಟಿ. ಕೊಲೆ ಬಳಿಕ ಬಸವರಾಜ್ ತನ್ನ ಹೆಂಡತಿ ಅಕ್ಷತಾಳ ಕೊಲೆ ಮಾಡಲು ಯತ್ನಿಸಿದ್ದ. ಆರೋಪಿಯ ಮುಂದಾಲೋಚನೆ ಅರಿತು ಬಸವರಾಜ್ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ಅಕ್ಷತಾ ಜೀವ ಕಾಪಾಡಿದ್ದಾರೆ.
ಯಮಕನಮರಡಿ ಇನ್ಸ್ಪೆಕ್ಟರ್ ಜಾವೀದ್ ಮುಶಾಪುರೆ ಚಾಣಾಕ್ಷತನದಿಂದ ಹೆಂಡತಿಯ ಜೀವ ಉಳಿದಿದೆ. ಮಹಾಂತೇಶ್ ಕೊಲೆ ವಿಚಾರ ಗೊತ್ತಾಗುತ್ತಿದ್ದಂತೆ ಎಚ್ಚರಿಕೆ ವಹಿಸಿದ್ದ ಯಮಕನಮರಡಿ ಪೊಲೀಸರು ಅಕ್ಷತಾ ತವರು ಮನೆ ಚಿಕ್ಕೋಡಿಯಲ್ಲಿದ್ದ ಬಸವರಾಜ್ ಹೆಂಡತಿ ಅಕ್ಷತಾಗೆ ಕೂಡಲೇ ಚಿಕ್ಕೋಡಿ ಪೊಲೀಸರಿಗೆ ಆಕೆಯ ರಕ್ಷಣೆಗೆ ಸೂಚಿಸಿದ್ದ ಎಸ್ಪಿ ಭೀಮಾಶಂಕರ್ ಗುಳೇದ್. ಎಸ್ಪಿ ಸೂಚನೆ ಮೇರೆಗೆ ಪತ್ನಿ ಮನೆ ಮುಂದೆ ನಿಂತಾಗಲೇ ಆರೋಪಿ ಬಸವರಾಜ್ ನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಕೊಲೆಗೆ ಮಚ್ಚು ಸಮೇತ ಹೋಗಿದ್ದ ಬಸವರಾಜ್.ಈ ವೇಳೆ ಆರೋಪಿ ಹಿಡಿದು ಪತ್ನಿ ರಕ್ಷಣೆ ಮಾಡಿದ್ದ ಚಿಕ್ಕೋಡಿ ಪೊಲೀಸರು. ಪ್ರಕರಣ ಸಂಬಂಧ ಆರೋಪಿ ಬಸವರಾಜ್ ಬುಕನಟ್ಟಿ, ವಿಠ್ಠಲ್ ಬಂಧಿಸಿದ್ದಾರೆ.
ಘಟನೆ ವಿವರ: ಕಳೆದ ಮೂರು ವರ್ಷದ ಹಿಂದೆ ಅಕ್ಷತಾಳ ಮದುವೆಯಾಗಿದ್ದ ಬಸವರಾಜ ಬುಕನಟ್ಟಿ ಬೆಳಗಾವಿ ಹಣ್ಣಿನ ವ್ಯಾಪಾರ ಮಾಡಿ ನಿತ್ಯ ಹುಕ್ಕೇರಿ ಶಹಾಬಂದರಗೆ ಹೋಗಿ ಬರುವುದು ಮಾಡುತ್ತಿದ್ದ. ಮಹಾಂತೇಶ ಬುಕನಟ್ಟಿ ಫುಡ್ ಡಿಲೇವರಿ ಬಾಯ್ ಆಗಿ ಕೆಲಸ ಮಾಡುತ್ತ, ಖಾಸಗಿ ಕಾಲೇಜಿನಲ್ಲಿ ಗ್ರಂಥಾಲಯರ ಕ್ಲಕ್೯ ಆಗಿ ಕೆಲಸ ಮಾಡುತ್ತಿದ್ದ. ಬಸವರಾಜ ದೂರದ ಸಂಬಂಧಿಯೂ ಆಗಿದ್ದ ಮಹಾಂತೇಶ ಹಾಗೂ ಅಕ್ಷತಾಳ ನಡುವೆ ಅಕ್ರಮ ಸಂಬಂಧ ಹೊಂದಿದ್ದರು. ಬಸವರಾಜ ಹಾಗೂ ಅಕ್ಷತಾಳ ಸುಂದರ ಸಂಸಾರಕ್ಕೆ ಒಂದು ಮಗು ಇದ್ದು, ಮಗುವನ್ನು ಶಹಾಬಂದರನಲ್ಲಿ ಬಿಟ್ಟು ಪ್ರೀಯಕರ ಮಹಾಂತೇಶನೊಂದಿಗೆ ಚಕ್ಕಂದ ಆಡುತ್ತ ಕಾಲ ಕಳೆಯುತ್ತಿದ್ದ ಅಕ್ಷತಾ ಶಹಾಬಂದರಲ್ಲಿನ ಮಗು ನೋಡಲು ಆಗಮಿಸಿರಲಿಲ್ಲ.
ಇದಕ್ಕೆ ರೋಸಿ ಹೋಗಿದ್ದ ಬಸವರಾಜ ಬುಕನಟ್ಟಿ ಮೌನ್ನೆ ಮಹಾಂತೇಶನನ್ನು ಕೊಲೆ ಮಾಡಿ ಚಿಕ್ಕೋಡಿಯಲ್ಲಿ ತವರು ಮನೆಯಲ್ಲಿದ್ದ ಅಕ್ಷತಾ ಮಗು ನೋಡಲು ಬಂದಿಲ್ಲ ಎಂದು ಕೊಲೆ ಮಾಡಲು ಹೊರಟಾಗ ಯಮಕನಮರಡಿ ಸಿಪಿಐ ಚಾಣಾಕ್ಷತನದಿಂದ ಆರೋಪಿ ಬಸವರಾಜನ್ನು ಬಂಧಿಸಿ ಅಕ್ಷತಾಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.