ಪಿರಿಯಾಪಟ್ಟಣ: ಕನ್ನಡ ನಾಡಿಗೆ ಐತಿಹಾಸಿಕ ಹಿನ್ನೆಲೆಯದ್ದು ಇದರ ಮಹತ್ವವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ ಎಂದು ಮುಖ್ಯ ಶಿಕ್ಷಕ ಬಿ.ಪಿ ಚನ್ನೇಗೌಡ ತಿಳಿಸಿದರು.
ತಾಲೂಕಿನ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ನಾಡು ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಹೊಂದಿ ಸಂಪತ್ಭರಿತ ನಾಡಾಗಿದೆ. ವಿದ್ಯಾರ್ಥಿ ಜೀವನದಿಂದಲೇ ನಾಡು ನುಡಿ ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ರಂಗೋಲಿಯಲ್ಲಿ ಕರ್ನಾಟಕ ಭೂಪಟ ಹಾಗೂ ಕನ್ನಡ ಬಾವುಟ ರಚಿಸಿ ದೀಪ ಹಚ್ಚುವ ಮೂಲಕ ವಿಶೇಷವಾಗಿ ಕಾರ್ಯಕ್ರಮ ಆಚರಿಸಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಶಿಕ್ಷಕರಾದ ಯೋಗೇಶ್ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕನ್ನಡ ನಾಡಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಶಿಕ್ಷಕರಾದ ವಿಶುಕುಮಾರ್, ಕೃಷ್ಣ, ಅತಿಥಿ ಶಿಕ್ಷಕಿ ಆಶಾ, ಗೌರವ ಶಿಕ್ಷಕರಾದ ರಕ್ಷಿತ್, ಚೈತ್ರ, ವೆಂಕಟೇಶ್ ಮೂರ್ತಿ ಹಾಗೂ ವಿದ್ಯಾರ್ಥಿಗಳು ಇದ್ದರು.
