ಕೆ.ಆರ್.ನಗರ: ಕುವೆಂಪು ಅವರ ವಿಶ್ವಮಾನವ ಸಂದೇಶ ಜಾಗತಿಕ ಸಂಘರ್ಷಗಳಿಗೆ ಸರಿದಾರಿಯನ್ನು ತೋರಲಿದ್ದು, ವಿಶ್ವಶಾಂತಿಗಾಗಿ ಅದನ್ನು ಆಚರಣೆಗೆ ತರುವುದು ಬಹಳ ಮುಖ್ಯವಾಗಿದೆ ಎಂದು ಕೆ.ಆರ್.ನಗರ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಹೊಸೂರು ಎ.ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದ ಕುವೆಂಪು ಜನ್ಮದಿನೋತ್ಸವ ಅಂಗವಾಗಿ ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಜಾತಿ ಧರ್ಮಗಳ ಹೆಸರಿನಲ್ಲಿ ಇಂದು ಪ್ರಪಂಚದಾದ್ಯಂತ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿದ್ದು ಕನ್ನಡಿಗನೊಬ್ಬ ನೀಡಿದ ವಿಶ್ವಮಾನವ ಸಂದೇಶವೊಂದೆ ಇದಕ್ಕೆ ಪರಿಹಾರವಾಗಿದೆ ಎಂದರು
ನಾಡುಕಂಡ ಅಪ್ರತಿಮ ಕವಿ ಮಾತ್ರವಲ್ಲದೇ ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು ಕುವೆಂಪು ಅವರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹೊಸರೂಪ ಕೊಟ್ಟ ಮಹಾಜ್ಞಾನಿ ಯಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ದಿನೇಶ್,ಕೃಷ್ಣ, ಮಾಜಿ ಉಪಾಧ್ಯಕ್ಷ ಭಾಸ್ಕರ್,ಡೈರಿ ಮಾಜಿ ಅಧ್ಯಕ್ಷರಾದ ಹೆಚ್.ಎಸ್ ರವಿ,ಪರಶುರಾಮ್, ಯಶವಂತ್, ಕಾಲೇಜು ಅಧ್ಯಕ್ಷ ಎಚ್.ಎಸ್.ಶ್ರೀನಿವಾಸ್, ಮುಖಂಡರಾದ ಡೈರಿ ಮಾಧು,ಎಚ್.ಆರ್.ರಾಘವೇಂದ್ರ, ಸಂಘಟನೆ ಮಂಜು, ರಾಮಸ್ವಾಮಿ,ಪುರಿಮಂಜ,ರಾಮಕಿ, ಕೋಳಿವಿನಿ,ಐಪಿ ವೆಂಕಟೇಶ್,ತರಕಾರಿ ಸುರೇಶ್, ಕೋಳಿ ದಿನಿ,ಕಾಂತ, ಶಿವಕುಮಾರ್,ಸಯದ್ ಸಲಿಂ, ಅಂಗಡಿ ಕುಮಾರ್, ಮದಿಯಣ್ಣ ಮಾಸ್ಟರ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.