ಶಿವಮೊಗ್ಗ: ಪ್ರಧಾನಿಯವರು ದೇಶದಲ್ಲಿರುವ ಕುಶಲಕರ್ಮಿಗಳಿಗೆ ಅವರ ವೃತ್ತಿಯನ್ನು ಸದೃಢಗೊಳಿಸಲು ದಿನಾಂಕ ೧೭-೦೯-೨೦೨೩ ಪಿ.ಎಂ.ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿರುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಚಿನ್ನ-ಬೆಳ್ಳಿ ವೃತ್ತಿಗಾರರ ಹಿತಾರಕ್ಷಣಾ ಸಮಿತಿ ಆಶ್ರಯದಲ್ಲಿ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಹಾಗೂ ಸಾಮಾನ್ಯ ಸೇವಾ ಕೇಂದ್ರ ರವರ ಸಹಕಾರದೊಂದಿಗೆ ಇಂದು ಗಾಂಧಿ ಬಜಾರಿನ ಬಸವೇಶ್ವರ ದೇವಸ್ಥಾನ ಸಭಾಂಣದಲ್ಲಿಂದು ಏರ್ಪಡಿಸಲಾಗಿದ್ದ ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಯೋಜನೆಯಡಿ ಕುಶಲಕರ್ಮಿಗಳಿಗೆ “ಪಿ.ಎಂ.ವಿಶ್ವಕರ್ಮ’ ಕಾರ್ಡ್ ವಿತರಣೆ, ತರಬೇತಿ, ಉಪಕರಣಗಳ ಕಿಟ್, ಪೊರೀತ್ಸಾಹ, ಮೊದಲ ಹಂತದಲ್ಲಿ ರೂ. ೬ ಲಕ್ಷ, ೨ನೇ ಹಂತದಲ್ಲಿ ರೂ.೨ ಲಕ್ಷದವರೆಗಿನ ಸಾಲವನ್ನು ಬ್ಯಾಂಕಿನ ಮೂಲಕ ಕೇವಲ ಶೇಕಡ ೫ ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಶಾಸಕ ಎಸ್. ಎನ್. ಚನ್ನಬಸಪ್ಪನವರು ಮಾತನಾಡಿ ಇಂದು ಶಿವಮೊಗ್ಗದ ಗಾಂಧಿ ಬಜಾರ್‍ನ ಬಸವೇಶ್ವರ ದೇವಸ್ಥಾನದಲ್ಲಿ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಂತೆ ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳು ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿ. ಈ ಯೋಜನೆಯಡಿ ಎಲ್ಲ ವರ್ಗದ ಕುಶಲಕರ್ಮಿಗಳು ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಎಸ್ ರಮೇಶ್, ಕಾರ್ಯದರ್ಶಿ ಸೋಮೇಶ್ ಪಿ. ಶೇಟ್, ಕಾಳಿಕಾ ಪರಮೇಶ್ವರಿ ಸೊಸೈಟಿಯ ಅಧ್ಯಕ್ಷರು, ಮಾಲತೇಶ್, ಗುರುಶೇಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್ ಗಣೇಶ್, ಉಪ ನಿರ್ದೇಶಕ ವೀರೇಶ ನಾಯ್ಕ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.