Sunday, April 20, 2025
Google search engine

Homeರಾಜ್ಯಸುದ್ದಿಜಾಲಅಸಮರ್ಪಕ ಕಾರ್ಯನಿರ್ವಹಣೆ: ಉದ್ಯೋಗ ಖಾತರಿ ಇಂಜಿನಿಯರ್ ವರ್ಗಾವಣೆಗೆ ಮನವಿ

ಅಸಮರ್ಪಕ ಕಾರ್ಯನಿರ್ವಹಣೆ: ಉದ್ಯೋಗ ಖಾತರಿ ಇಂಜಿನಿಯರ್ ವರ್ಗಾವಣೆಗೆ ಮನವಿ

ಹೊಸೂರು : ಗ್ರಾಮ ಪಂಚಾಯಿತಿಗೆ ಸಮರ್ಪಕವಾಗಿ ಬಾರದ ಉದ್ಯೋಗ ಖಾತರಿ ಇಂಜಿನಿಯರ್ ಅವರನ್ನು ಕೂಡಲೇ ಬೇರಡೆಗೆ ವರ್ಗಾವಣೆ ಮಾಡಲು ಕೆ.ಆರ್.ನಗರ ತಾಲೂಕು ಪಂಚಾಯಿತಿ ಇಓ ಅವರು ಮುಂದಾಗ ಬೇಕೆಂದು ಹಳಿಯೂರು ಗ್ರಾ.ಪಂ.ಸದಸ್ಯರು ಒತ್ತಾಯಿಸಿದರು
ಶುಕ್ರವಾರ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾ.ಪಂ‌.ನಲ್ಲಿ ಅಧ್ಯಕ್ಷೆ ಡಿ.ಜೆ.ರೇಖಾಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂಜಿನಿಯರ್ ಭಾನುಮತಿ ಅವರು ಗ್ರಾಪಂಗೆ ಸಮಪರ್ಕವಾಗಿ ಬಾರದೇ ಕೆಲಸ ಕಾರ್ಯಗಳಿಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಖಾತ್ರಿ ಯೋಜನೆ ಅನುಷ್ಠಾನಕ್ಕೆ ತೊಂದರೆ ಅಗುತ್ತಿದ್ದು ಅವರನ್ನು ವರ್ಗಾವಣೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದಾಗ ಅಧ್ಯಕ್ಷರು ಈ ಬಗ್ಗೆ ಇಓ ಅವರ ಗಮನಕ್ಕೆ ತರಲಾಗುವುದು ಎಂದರು
ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ಈ ಹಿಂದೆ ಮನೆಗಳಿಗಾಗಿ ಪಟ್ಟಿ ಮಾಡಿರುವ ಫಲಾನುಭವಿಗಳ ಮಾಹಿತಿ ನೀಡಿ ಅರ್ಹರನ್ನು ಆಯ್ಕೆ ಮಾಡಲು ಮತ್ತು ೧೫ನೇ ಹಣಕಾಸು ಯೋಜನೆಯ ೪೬ಲಕ್ಷರೂಗಳಲ್ಲಿ ಅವಶ್ಯವಿರುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಯ ಪಟ್ಟಿಗೆ ಒಪ್ಪಿಗೆ ಸೂಚಿಸಲಾಯಿತು
ಗ್ರಾಪಂ ವ್ಯಾಪ್ತಿಯಲ್ಲಿ ಮಟನ್,ಚಿಕನ್ ಅಂಗಡಿಗಳ ಈಗಾಗಲೇ ಮಾಡಿರುವ ಹರಾಜು ಬಾಕಿ ಮೊತ್ತ ಉಳಿಸಿಕೊಂಡಿರುವ ಮಾಲೀಕರು ತಕ್ಷಣವೇ ಹಣ ಪಾವತಿ ಮಾಡಬೇಕು ಇಲ್ಲವಾದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ ಹೊಸದಾಗಿ ಹರಾಜು ನಡೆಸಲು ಸಭೆಯಲ್ಲಿದ್ದ ಸದಸ್ಯರು ಸಮ್ಮತಿ ನೀಡಿದರು
ಅಂಗವಿಕಲರ ಅನುದಾನದಲ್ಲಿ ಶೇ.೫. ಅನುಧಾನವನ್ನು ಸಾಲೇಕೊಪ್ಪಲು ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಹಣ ನೀಡಲು ಇದೇ ಸಂಧರ್ಭದಲ್ಲಿ ಒಪ್ಪಿಗೆ ಸೂಚಿಸಲಾಯಿತು ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ 24 ಧನದ ಕೊಟ್ಟಿಗೆ ನಿರ್ಮಾಣ ಮಾಡಲು ಸಭೆ ನಿರ್ಣಯ ಕೈಗೊಂಡಿತು
ಈ ಸಂದರ್ಭದಲ್ಲಿ ಮಾತನಾಡಿದ ರೇಖಾಜಗದೀಶ್ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕು ಮತ್ತು ಬೀದಿ ದೀಪಗಳು ಕೆಟ್ಟರೇ ತಕ್ಷಣವೇ ದೀಪಗಳ ಹಾಕಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು
ಸಭೆಯಲ್ಲಿ ಗ್ರಾಪಂ ಪಿಡಿಒ ಚಿದಾನಂದ್,ಉಪಾಧ್ಯಕ್ಷ ನೂತನ್,ಸದಸ್ಯರಾದ ಎಚ್.ಆರ್.ಮಹೇಶ್, ಹೆಚ್.ಆರ್ ದಿನೇಶ್, ಶ್ರೀನಿವಾಸ್, ದಿಡ್ಡಹಳ್ಳಿ ಕೃಷ್ಣ,ರೇಣುಕಾ,ಕೃಷ್ಣಮೂರ್ತಿ, ಪ್ರವೀಣ್ ವಿನಯ್,ಮಣಿ,ಮಂಜುಳಮ್ಮ, ಸಾಧಿಕ್,ಕಾವ್ಯ,ಮಲ್ಲೇಶಾಚಾರಿ,ರಾಜೇಶ್ವರಿ,ಹೇಮಲತಾ,ಲಕ್ಷ್ಮಿ,ನಾಗಮ್ಮ,ಕಾರ್ಯದರ್ಶಿ ಚಂದ್ರು, ಬಿಲ್ ಕಲೆಕ್ಟರ್ ರಂಗಸ್ವಾಮಿ, ಸಿಬ್ಬಂದಿಗಳಾದ ಡಿ.ಎಚ್.ಹರೀಶ, ಮಧುಸೂದನ್, ಬಿಂದು ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular