Friday, April 4, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅಭಿಮಾನಿಗಳಿಂದ ಭಾವ ಪೂರ್ಣ ಶ್ರದ್ಧಾಂಜಲಿ

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅಭಿಮಾನಿಗಳಿಂದ ಭಾವ ಪೂರ್ಣ ಶ್ರದ್ಧಾಂಜಲಿ

ಹೊಸೂರು: ನಿಧನರಾದ ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಎಸ್.ಎಂ.ಕೃಷ್ಣ ಅಭಿಮಾನಿಗಳು ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಗ್ರಾಮದ ಆಸ್ವತ್ರೆ ಅವರಣ ಬಳಿ ಯುವ ಕಾಂಗ್ರೇಸ್ ಮುಖಂಡ ಹೊಸೂರು ಡೈರಿ ಮಾದು ನೇತೃತ್ವದಲ್ಲಿ ಎಸ್.ಎಂ ಕೃಷ್ಣ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿ ನಿಧನ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಹೊಸೂರು ಎ.ಕುಚೇಲ್ ಕೃಷ್ಣ ಅವರು ಮುಖ್ಯ ಮಂತ್ರಿ ಅಗಿದ್ದಾಗ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು ಬೆಂಗಳೂರು ಅಭಿವೃದ್ದಿಯ ಜೊತಗೆ ಐಟಿ.ಬಿಟಿ ಬೆಳವಣಿಗೆ ಸಾಕಷ್ಟು ಕೊಡುಗೆ ನೀಡಿದ ನಾಡು ಕಂಡ ಶಿಸ್ತು ಬದ್ದ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದ ಇವರ ಸಾವು ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಸ್.ಶ್ರೀನಿವಾಸ್.ಎಚ್.ಜೆ.ರಮೇಶ್, ಹೆಚ್.ಕೆ.ಕೀರ್ತಿ, ಎಚ್.ಎನ್.ರಮೇಶ್, ಪೇಪರ್ ಪ್ರಮೋದ್, ಎಲ್.ಐ.ಸಿ.ರಮೇಶ್, ಎಚ್.ಆರ್.ರಾಘವೇಂದ್ರ, ಬಿಲ್ ಕಲೆಕ್ಟರ್ ಶ್ರೀನಿವಾಸ್, ತರಕಾರಿ ಸುರೇಶ್, ಪುರಿ ಮಂಜ,ನಾಗಣ್ಣ, ಡಿ.ಜೆ.ಕೃಷ್ಣ,ಪಾಪಣ್ಣ, ಗಣೇಶ್, ಗಿರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular