ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ವಿಶ್ವ ಹಿಂದೂ ಪರಿಷತ್ ನ
ಸಂಸ್ಥಾಪನ ದಿನ ಹಾಗೂ ಷಷ್ಠಿ ಪೂರ್ತಿ ಕಾರ್ಯಕ್ರಮ ದೀಪ ಬೆಳಗಿಸಿ ಮಾತನಾಡಿದ ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಆರೂರು ವಾಸುದೇವ್ ರಾವ್ ಭಾರತದಲ್ಲಿ ಧರ್ಮ ಜಾಗೃತಿಯಾಗುತ್ತಿದೆ ಅಂದರೆ ಅದು ವಿಶ್ವ ಹಿಂದೂ ಪರಿಷತ್ ನಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. 60 ವರ್ಷಗಳಿಂದ ಭಾರತದಲ್ಲಿ ಸಂಘಟನೆ, ಧರ್ಮ ಪ್ರಚಾರ, ಧರ್ಮ ಜಾಗೃತಿ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ನಂತರ ಮಾತನಾಡಿದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮೇಲುಕೋಟೆಯ ವಂಗೀಪುರದ ನಂಬೀ ಮಠದ ಇಳೈ ಆಳ್ವಾರ್ ಸ್ವಾಮೀಜಿಯವರು ಮನೆ ಮನೆಗಳಲ್ಲಿ ಇಂದು ಧರ್ಮ ಉಳಿಸುವ ಕೆಲಸ ಮಾಡದಿದ್ದರೆ ನಾಳೆ ಭವಿಷ್ಯ ಕಷ್ಟವಾಗಲಿದೆ ಎಂದು ತಿಳಿಸಿದರು.
ಆಶಿರ್ವಚನ ನೀಡಿದ ಶ್ರೀ ಶಾರದಾ ವಿಶ್ವಭಾವೈಕ್ಯ ಆಶ್ರಮದ ಮಾತಾ ಅಮೋಘಮಯಿ ರವರು ಭಗವದ್ಗೀತೆಯ ಸಂದೇಶ ತಿಳಿಸಿದರು. ಭಗವದ್ಗೀತೆಯನ್ನು ಕಲಿತವರು ಎಂದೂ ಸಮಾಜಘಾತುಕರಾಗಲಾರರು ಎಂದು ತಿಳಿಸಿದರು. ನಂತರ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಅಧ್ಯಕ್ಷರಾದ ಮಹೇಶ್ ಕಾಮಾತ್ , ಮಾತನಾಡಿ ವಿಶ್ವ ಹಿಂದೂ ಪರಿಷತ್ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ ಭಾರತವನ್ನು ಮತ್ತೊಮ್ಮೆ ಧಾರ್ಮಿಕವಾಗಿ ಸದೃಢ ಮಾಡಲು ಸಾರ್ವಜನಿಕರು ವಿಶ್ವ ಹಿಂದೂ ಪರಿಷತ್ ಜೊತೆ ಕೈಜೋಡಿಸಿ ಸಂಘಟನೆಯನ್ನು ಬಲಪಡಿಸಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಜಗದೀಶ್ ಹೆಬ್ಬಾರ್, ಅಂಬಿಕಾ ಜೀವನ್, ಸುಬ್ರಹ್ಮಣ್ಯ ಜಟ್ಟಪ್ಪ, ಜನಾರ್ದನ ರಾವ್, ಮಧು ಶಂಕರ್, ಪುನೀತ್ ಜಿ ಕೂಡ್ಲೂರು, ಶಿವು , ವಿಜಯೇಂದ್ರ, ಶ್ರೀಮತಿ ಸುಪ್ರಭಾ ಎಸ್. ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.