ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೈಸೂರಿನಿಂದ ಕೆ. ಆರ್. ನಗರದ ಮೂಲಕ ಹೊಳೆ ನರಸಿಪುರ ತಾಲೂಕಿನ ಬಿದರಕ್ಕ ಗ್ರಾಮಕ್ಕೆ ಕೊಳಲು ಗೋಪಾಲಸ್ವಾಮಿ ದೇವಾಲಯ ಉದ್ಘಾಟನೆಗೆ ತೆರಳಿದ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಪಟ್ಟಣದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಪುರಸಭೆ ವೃತ್ತಕ್ಕೆ ಆಗಮಿಸಿದ ಕೇಂದ್ರ ಸಚಿವರಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಬರಮಾಡಿಕೊಂಡರು. ಕೇಂದ್ರ ಸಚಿವರು ಕೆ. ಆರ್ ನಗರ ಪಟ್ಟಣದ ಮೂಲಕ ಹೊಳೆನರಸೀಪುರ ತಾಲೂಕಿಗೆ ಪ್ರಯಾಣ ಬೆಳೆಸುವ ಸುದ್ದಿ ತಿಳಿದ ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನ ನೂರಾರು ಮಂದಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಆಗಮಿಸಿದ್ದರು.
ನಾನು ಕೇಂದ್ರ ಸಚಿವನಾಗಿರುವುದರಿಂದ ಪಕ್ಷದ ಸಂಘಟನೆಗೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಅನುಕೂಲವಾಗಿದ್ದು ಈ ವಿಚಾರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕ್ಷೇತ್ರದ ಜನತೆ ನನ್ನನ್ನು ಸದಾ ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳಬಹುದು ಎಂದರು.
ಕೆ. ಆರ್. ನಗರದಿಂದ ಹಂಪಾಪುರ, ಹೊಸ ಅಗ್ರಹಾರ, ಬೇರ್ಯ ಗ್ರಾಮಗಳ ಮೂಲಕ ಸಾಲಿಗ್ರಾಮ ತಾಲೂಕು ಕೇಂದ್ರಕ್ಕೆ ತೆರಳಿ ಅಲ್ಲಿಂದ ಬಿದರಕ್ಕ ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪುಷ್ಪಮಾಲೆ ಸಲ್ಲಿಸಿ ಬರಮಾಡಿಕೊಂಡರು.
ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜೆಡಿಎಸ್ ಅಧ್ಯಕ್ಷ ಹೆಚ್.ಸಿ. ಕುಮಾರ್, ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷ ಭಾಗ್ಯಲಕ್ಷ್ಮಿ, ನಗರ ಕಾರ್ಯದರ್ಶಿ ರುದ್ರೇಶ್, ಪುರಸಭೆ ಸದಸ್ಯರಾದ ಕೆ. ಎಲ್. ಜಗದೀಶ್, ಸಂತೋಷ್ ಗೌಡ, ಉಮೇಶ್, ಮಂಜುಳಚಿಕ್ಕವೀರು. ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗೆರೆಕುಚೇಲ, ಗ್ರಾ.ಪಂ. ಸದಸ್ಯ ಬಾಲಾಜಿ ಗಣೇಶ್, ಮುಖಂಡ ಘಟನೆ ಕುಮಾರ್ ಮತ್ತಿತರರು ಇದ್ದರು.

ಚಂದಗಾಲು ಗ್ರಾಮಕ್ಕು ಭೇಟಿ: ನಂತರ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಾಲ್ಕು ತಿಂಗಳ ಹಿಂದೆ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ತಂದೆ, ಮಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೃತರ ಮನೆಗೆ ಬೇಟಿ ನೀಡಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭವಿಷ್ಯದಲ್ಕಿಏನೇ ಸಮಸ್ಯೆ ಬಂದರು ದೈರ್ಯವಾಗಿ ಎದುರಿಸಬೇಕೆಂದು ಸಮಾಧಾನ ಹೇಳಿದ ಅವರು ಎಂತಹ ಸಂಕಷ್ಠದ ಸಮಯ ಬಂದರು ಆತ್ಮಹತ್ಯೆ ಮಾಡಿ ಕೊಳ್ಳಬಾರದು ಎಂದು ದೈರ್ಯ ತುಂಬಿದರಲ್ಲದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಮಹಿಳೆಯ ಮಗನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರದಿಂದ ಈಗ ನೀಡಿರುವ ಪರಿಹಾರದ ಜೊತೆಗೆ ಉಳಿಕೆ ಪರಿಹಾರದ ಮೊತ್ತವನ್ನು ಕೂಡಲೇ ಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಸೂಚನೇ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸ ಬಾರದು ಎಂದು ತಿಳಿಸಿದರು.
ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಸಾಥ್ ನೀಡಿದ್ದರು. ರಾಜ್ಯ ಜೆಡಿಎಸ್ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, , ನಗರ ಕಾರ್ಯದರ್ಶಿ ರುದ್ರೇಶ್, ತಾಲೂಕು ಜಾದಳ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಜೆಡಿಎಸ್ ಮುಖಂಡರಾದ ಹಂಪಾಪುರ ಸೂರಿ, ಚಂದಗಾಲು ರಾಘು, ಹೊಟೇಲ್ ಮಹದೇವ ಮೊದಲಾದವರು ಇದ್ದರು.