Saturday, April 19, 2025
Google search engine

Homeರಾಜ್ಯಸುದ್ದಿಜಾಲಆಸ್ತಿ ತೆರಿಗೆ ಪಾವತಿಯಲ್ಲಿಶೇ. 5ರಷ್ಟು ರಿಯಾಯಿತಿ ಅವಧಿ ವಿಸ್ತರಣೆ: ಸವಿತಾ ಪಿ.ಆರ್.

ಆಸ್ತಿ ತೆರಿಗೆ ಪಾವತಿಯಲ್ಲಿಶೇ. 5ರಷ್ಟು ರಿಯಾಯಿತಿ ಅವಧಿ ವಿಸ್ತರಣೆ: ಸವಿತಾ ಪಿ.ಆರ್.

ರಾಮನಗರ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ) ಆರ್ಥಿಕ ವರ್ಷದ ಪ್ರಾರಂಭದ ೩೦ ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದ್ದಲ್ಲೀ ಶೇ.೫ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದಅವಧಿಯನ್ನುಇದೇ ಜು.೩೧ರ ವರೆಗೆ ವಿಸ್ತರಿಸಲಾಗಿದೆ, ಜಿಲ್ಲೆಯಜನತೆಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತಾಪಿ.ಆರ್. ಅವರುಕರೆ ನೀಡಿದರು.

ಅವರುಜು.೮ರ ಸೋಮವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಅಂಗವಾಡಿ ಸ್ಥಿತಿಗತಿಗಳನ್ನು ಪರಿಶೀಲಿಸಲು ಇತ್ತೀಚೆಗೆ ಕೆಲವುಅಂಗವಾಡಿಗಳಿಗೆ ಭೇಟಿ ನೀಡಲಾಗಿತ್ತು, ಆ ಸಮಯದಲ್ಲಿ ಕೆಲವೊಂದು ಅಂಗನವಾಡಿಗಳಲ್ಲಿ ಆಹಾರದಗುಣಮಟ್ಟಕಳಪೆಯಾಗಿದ್ದು ಕಂಡುಬಂತು, ಅಲ್ಲಿನಶೌಚಾಲಯಗಳು ಸ್ವಚ್ಛವಾಗಿರಲಿಲ್ಲ, ಕೆಲವೊಂದು ಅಂಗನವಾಡಿಗಳಲ್ಲಿ ಅಡುಗೆ ಕೋಣೆಗಳೇ ಇರಲಿಲ್ಲ, ಅಲ್ಲಿನಸ್ವಚ್ಛತೆಗೆ ಗಮನ ನೀಡಬೇಕಿದ್ದಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪರಿಶೀಲಿಸದೇಇರುವುದುಕೂಡಈ ವೇಳೆ ಪತ್ತೆಯಾಯಿತುಎಂದರು.

ಜಿಲ್ಲೆಯಲ್ಲಿ ಸಾಕಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆಕಟ್ಟಡದಲ್ಲಿ ನಡೆಯುತ್ತಿವೆ, ಕೆಲವೊಂದು ಕಡೆ ಅವಧಿ ಮುಗಿದ ಆಹಾರ ಪದಾರ್ಥ ಕಂಡುಬಂತು, ೩-೬ ವರ್ಷದ ಮಕ್ಕಳು ಅಂಗನವಾಡಿಗಳಿಗೆ ಹೋಗುತ್ತಾರೆ, ಅವರಿಗೆ ಗುಣ ಮಟ್ಟದ ಆಹಾರ ನೀಡದಿದ್ದಲ್ಲಿ ಅವರ ಬೆಳವಣಿಗೆ ಕುಂಠಿತವಾಗುತ್ತದೆ.ಕೆಲವೊಂದುಕಡೆ ಶೌಚಾಲಯದ ಬಳಿ ಪಾತ್ರೆಗಳನ್ನು ಸ್ಪಚ್ಚಮಾಡಲಾಗುತ್ತಿದೆ, ಕೆಲವು ಅಂಗನವಾಡಿಗಳಲ್ಲಿ ಸಂದರ್ಶಕರ ಪುಸ್ತಕವೇ ಇಲ್ಲಎಂದು ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ವಿವಿಧರೀತಿಯ ಸಂಸ್ಥೆಗಳಿಗೆ ಕಾನೂನು ನೆರವು, ಸೇವೆಗಳನ್ನು ನೀಡುವ ಸಲುವಾಗಿ ಅರೆಕಾಲಿಕಕಾನೂನು ಸ್ವಯಂಸೇವಕರನ್ನುಆಯ್ಕೆಮಾಡಬೇಕಿದೆ ಎಂದರು.

ಶಿಕ್ಷಕರು (ನಿವೃತ್ತ ಶಿಕ್ಷಕರು ಸೇರಿ), ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರೀಕರು, ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು, ಉಪನ್ಯಾಸಕರು, ಅಂಗನವಾಡಿಕಾರ್ಯಕರ್ತೆಯರು, ವೈದ್ಯರು, ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು (ವಕೀಲರಾಗಿ ನೋಂದಣಿಯಾಗುವವರೆವಿಗೂ) ರಾಜಕೀಯವಲ್ಲದ ಸಂಘಗಳ ಸದಸ್ಯರು, ಸೇವಾ ಮನೋಭಾವಇರುವ ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮೈತ್ರಿ ಸಂಘಗಳು, ವಿದ್ಯಾವಂತಉತ್ತಮ ನಡತೆವುಳ್ಳ ಹೆಚ್ಚಿನಅವಧಿಕಾರಾಗೃಹದಲ್ಲಿ ಕಳೆಯುತ್ತಿರುವ ಅಪರಾಧಿಗಳು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಅರೆಕಾಲಿಕ ಕಾನೂನು ಸ್ವಯಂ ಸೇವಕರೆಂದು ನಿರ್ಧರಿಸುವಇತರೆಯಾವುದೇ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದುಎಂದು ವಿವರಿಸಿದರು.

ಜಿಲ್ಲೆಯ ಹಾಗೂ ಆಯಾಯ ತಾಲ್ಲೂಕುಗಳಿಂದ ಗೌರವಧನದ ಮೇರೆಗೆ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ವರ್ಗೀಕರಣದನ್ವಯ ನಿಗಧಿತ ನಮೂನೆಯಲ್ಲಿಇಚ್ಛೆಯ ಪತ್ರವನ್ನು ಒಳಗೊಂಡಂತೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿಒಟ್ಟು ೧೭೫ ಹುದ್ದೆಗಳು ಖಾಲಿ ಇದ್ದು, ರಾಮನಗರತಾಲ್ಲೂಕು ೧೦೦, ಚನ್ನಪಟ್ಟಣತಾಲ್ಲೂಕು ೨೫, ಕನಕಪುರ ೨೫ ಹಾಗೂ ಮಾಗಡಿ ೨೫ ಹುದ್ದೆಗಳಿಗೆ ಅರ್ಜಿಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.ವಸ್ತು ಸ್ಥಿತಿಯ ಬಗ್ಗೆ ಹಾಗೂ ಪರಿಸ್ಥಿತಿಯ ವಿಷಯಗಳನ್ನು ಉತ್ತಮವಾಗಿಅರ್ಥ ಮಾಡಿಕೊಳ್ಳಬೇಕು.ಯಾವುದೇಕ್ರಿಮಿನಲ್ ಹಿನ್ನೆಲೆಇರಬಾರದುಎಂದು ತಿಳಿಸಿದರು.


ಅರ್ಜಿಯೊಂದಿಗೆತಮ್ಮ ಸ್ವ-ವಿವರಇರುವಅರ್ಜಿ, ತಮ್ಮಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು ಹಾಗೂ ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಅಭ್ಯರ್ಥಿಯುಕಾರ್ಯ ನಿರ್ವಹಿಸಲು ಇಚ್ಛಿಸುವ ಬಗ್ಗೆ ಸ್ವ-ಇಚ್ಛಾ ಪತ್ರ ಸಲ್ಲಿಸಬೇಕು ಎಂದರು. ನೇಮಕಾತಿತಾತ್ಕಾಲಿಕವಾಗಿರುತ್ತದೆ.ಯಾವುದೇ ಸಂಬಳ, ವೇತನಗಳು ಇರುವುದಿಲ್ಲ. ಕೇವಲ ಗೌರವಧನದಆಧಾರದ ಮೇಲೆ ಮೂರು ವರ್ಷದಅವಧಿಗೆಮಾತ್ರ ನೇಮಕಾತಿಮಾಡಲಾಗುವುದು.ಸಮಿತಿಯತೀರ್ಮಾನಅಂತಿಮ.ಅಭ್ಯರ್ಥಿಗಳಿಗೆ ಈ ಹುದ್ದೆಗಳಲ್ಲಿ ಮುಂದುವರೆಸುವ ಬಗ್ಗೆ ಯಾವುದೇಖಾಯಂ ಮಾಡಿಕೊಳ್ಳುವ ಬಗ್ಗೆ ಪ್ರಾಧಿಕಾರಯಾವುದೇಆಶ್ವಾಸನೆ ನೀಡುವುದಿಲ್ಲ ಹಾಗೂ ಅಭ್ಯರ್ಥಿಗಳು ಆ ಬಗ್ಗೆ ಯಾವುದೇ ಹಕ್ಕು ಮಂಡಿಸಲುಅರ್ಹರಾಗಿರುವುದಿಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular