- ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕುಶಾಲನಗರದಲ್ಲಿ ನಡೆದ ನಾಲ್ಕು ಹಲ್ಲಿನ ಹಳ್ಳಿ ಕಾರ್ ತಳಿಯ ಅತ್ಯುತ್ತಮ ರಾಸುಗಳ ಸ್ಪರ್ಧೆಯಲ್ಲಿ ಸಾಲಿಗ್ರಾಮ ಹಳೆಯೂರು ಗ್ರಾಮದ ರಾಸುಗಳು ಪ್ರಥಮ ಸ್ಥಾನ ಪಡೆದು ಕೊಂಡಿವೆ.
ಕುಶಾಲನಗರದ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಶ್ರೀ ಮಹಾ ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನಡೆದ ಈ ಸ್ಪರ್ಧೆಯಲ್ಲಿ ಹಳಿಯೂರು ಗ್ರಾಮದ ಪುನಿತ್ ಪುಟ್ಟರಾಜು ಅವರ ರಾಸುಗಳು ಪ್ರಥಮ ಸ್ಥಾನ ಪಡೆದು ಕೊಂಡಿವೆ. ಈ ರಾಸುಗಳ ಸ್ಪರ್ಧೆಯಲ್ಲಿ ರಾಸುಗಳ ಹಲ್ಲುಗಳು, ಜಾತಿ, ಬಣ್ಣ, ಜೋಡಿ, ಮತ್ತು ಕ್ಯಾಟ್ ವಾಕ್ ಗಳ ಮೂಲಕ ರಾಸುಗಳಿಗೆ ನೀಡುವ 50 ಅಂಕಗಳಲ್ಲಿ 46 ಅಂಕವನ್ನು ಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನಗಾಗಿಸಿಕೊಂಡರು.
ಪ್ರಶಸ್ತಿ ವಿಜೇತ ರಾಸುಗಳಿಗೆ ಹತ್ತು ಸಾವಿರ ನಗದು ಮತ್ತು ಟ್ರೊಫಿಯನ್ನು ವಿತರಣೆ ಮಾಡಲಾಗಿದೆ.

ಈ ರಾಸುಗಳಿಗೆ ಈ ಪ್ರಶಸ್ತಿ ದೊರೆತ್ತಿರುವುದಕ್ಕೆ ಸಾಲಿಗ್ರಾಮ ತಾಲೂಕಿನ ಹಳ್ಳಿಕಾರ್ ತಳಿಯ ರಾಸುಗಳ
ರೈತರ ಪರವಾಗಿ ಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಿಕ್ಕಕೊಪ್ಪಲು ಡಿ ಪುನೀತ್ ಅವರು ಪುನಿತ್ ಪುಟ್ಟರಾಜು ಅವರನ್ನು ಅಭಿನಂಧಿಸಿದ್ದಾರೆ.