ಜಾರ್ಖಂಡ ರಾಜ್ಯದ ರಾಂಚಿ ವಿಶ್ವ ವಿದ್ಯಾನಿಲಯ ಸಂಯೋಜನೆಯ ಪ್ರತಿಷ್ಠಿತ ಗಾಸ್ನರ್ ಕಾಲೇಜಿನಲ್ಲಿ ಜೂನ್ 8,9 ರಂದು 9ನೇ ಅಂತರಾಷ್ಟ್ರೀಯ ಸಮ್ಮೇಳನವು “Global Effort for Upliftment of Rural Mass through Biological Sciences and Multidisciplinary Research” ಎಂಬುದರ ಕುರಿತಾಗಿ ನಡೆಯಿತು.
ಈ ಸಮ್ಮೇಳನದಲ್ಲಿ, ಮೈಸೂರಿನ ಪ್ರೊ. ಜಿ. ಪಾಂಡುರಂಗ ಮೂರ್ತಿ, (ಡಾಕ್ಟರ್ ಆಫ್ ಸೈನ್ಸ್ ಉತ್ಕೃಷ್ಟ ಪದವಿ ಪುರಸ್ಕೃತರು), ರವರು ಆಹ್ವಾನಿತ ಪ್ರಧಾನ ಭಾಷಣ ಮಾಡಿದ್ದಾರೆ.
ಇವರ ನವೀಕೃತ ಹಸಿರು ಶಕ್ತಿ, ಜೈವಿಕ ಇಂಧನ ತಯಾರಿಕೆ, ನೀರಿನ ಬುಗ್ಗೆಗಳು ಮತ್ತು ಸೆಲೆಯ ಸಂರಕ್ಷಣೆ ಮತ್ತು ಸುಸ್ಥಿರ ತಂತ್ರಜ್ಞಾನ ಹಾಗು ಅನುಷ್ಠಾನದ ಕುರಿತ ಸಂಶೋಧನಾ ಕೊಡುಗೆಯನ್ನು ಪರಿಗಣಿಸಿ ಸಮ್ಮೇಳನದ ವಿಜ್ಞಾನ ಮತ್ತು ತಾಂತ್ರಿಕ ಸಮಿತಿಯ ಆಯ್ಕೆಯನುಸಾರ, ರಾಂಚಿ ವಿಶ್ವವಿದ್ಯಾನಿಲಯದ ಕುಲಪತಿಗಳು, ಪ್ರೊ. ಅಜಿತ್ ಕುಮಾರ್ ಸಿನ್ಹ ಹಾಗು CSIR-ICAR ಸಂಸ್ಥೆಯ ವಿಶ್ರಾಂತ ನಿರ್ದೇಶಕರು ಡಾ. ಜನಾರ್ಧನ್ ಜೀ ರವರು, ಪ್ರೊ. ಜಿ. ಪಾಂಡುರಂಗ ಮೂರ್ತಿಯವರಿಗೆ ವರ್ಷದ ವಿಜ್ಞಾನಿ-2024 ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಪ್ರೊ. ಜಿ. ಪಾಂಡುರಂಗ ಮೂರ್ತಿ ಯವರು ಕೃಷಿ ಬೆಳೆಗಳ ಮೇಲೆ ರಾಸಾಯನಿಕ ಕೀಟ ನಾಶಕಗಳ ಪರಿಣಾಮದ ಕುರಿತಾದ ಸಂಶೋಧನೆಗೆ ಮೈಸೂರು ವಿ. ವಿ ಯಿಂದ ಮೊದಲ ಪಿಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದು, ನಂತರದಲ್ಲಿ ಪಾರಂಪರಿಕ ಗಿರಿ-ಜನ ಔಷದ ಪದ್ಧತಿಯ ವ್ಯೆಜ್ಞಾನಿಕ ಮತ್ತು ಔಷದ ಶಾಸ್ತ್ರದ ರಾಸಾಯನಿಕ ಸಮೀಕರಣಗಳ ಕುರಿತು ಸಮಗ್ರವಾಗಿ ನಡೆಸಿದ ಸಂಶೋಧನೆಗೆ ಆಂಧ್ರಪ್ರದೇಶ ದ JNTU ವಿಶ್ವ ವಿದ್ಯಾನಿಲಯವು ಜೈವಿಕ ರೂಪದ ಔಷದ ಶಾಸ್ತ್ರದಲ್ಲಿ ಎರಡನೇ ಪಿಎಚ್ ಡಿಯನ್ನು ಪಡೆದುಕೊಂಡಿದ್ದಾರೆ.
ಡಾ. ಜಿ ಪಾಂಡುರಂಗ ಮೂರ್ತಿ ಯವರು ಸಾಮಾಜಿಕ/ ಸಮುದಾಯ ವಿವಿದ ಕ್ಷೇತ್ರಳಲ್ಲಿ ಬಳಕೆಗಾಗಿ, ಜೈವಿಕ ಇಂಧನ ತಯಾರಿಕೆ, ಕೃಷಿ ಯಂತ್ರ ತಂತ್ರಜ್ಞಾನದ ಬಳಕೆ, ಗಿರಿ ಜನ ಔಷದ ಪದ್ದತಿಯ ಗಣಕೀಕೃತ ದತ್ತಾoಶದ ಸಾಫ್ಟ್ವೇರ್, ಸೆನ್ಸಾರ್ ಆಯೋಜಿತ ಜೈವಿಕ ಇಂಧನ ವಿಶ್ಲೇಷಣೆ, ಕೃಷಿ ಬೆಳೆಗಳಿಗೆ ಜೈವಿಕ ಬಲವರ್ಧಕ ನಿರೂಪಣೆ ಕುರಿತಾಗಿ 6 ತಂತ್ರಜ್ಞಾನಗಳನ್ನು ಕೊಡುಗೆಯಾಗಿ, ರೈತರಿಗೆ, ಸಮುದಾಯಗಳಿಗೆ, ಸಣ್ಣ ಉದ್ಯಮಿಗಳಿಗೆ ಕ್ರಮವಾಗಿ ನೀಡಿದ್ದಾರೆ.
ಇದಷ್ಟೇ ಅಲ್ಲದೇ, ಮುಂದುವರೆದ ಭಾಗದಲ್ಲಿ, ಪ್ರೊ. ಜಿ. ಪಾಂಡುರಂಗ ಮೂರ್ತಿಯವರು ರಾಂಚಿ ವಿ. ವಿ ಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಉತ್ಕೃಷ್ಟ ಪದವಿಯಾದ ಡಾಕ್ಟರ್ ಆಫ್ ಸೈನ್ಸ್ DSc ಪದವಿಯನ್ನು (ಶಕ್ತಿಯ ಆಕರಗಳು ಮತ್ತು ತಂತ್ರಜಾನದ ಕುರಿತಾದ ಸುದೀರ್ಘ ಸಂಶೋಧನೆಗೆ) ಪಡೆದುಕೊಂಡಿದ್ದು ರಾಷ್ಟ್ರದ ಮೇಕ್ ಇನ್ ಇಂಡಿಯಾ ದ್ಯೇಯೋದ್ದೇಶದ ಸಂಶೋಧನೆಯಲ್ಲಿ ನಿರಂತರ ತೊಡಗಿಸಿಕೊಂಡಿರುವುದು ಗಮನಾರ್ಹ ಮತ್ತು ಅತ್ಯಂತ ಶ್ಲಾಘನೀಯವಾಗಿದೆ.