ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಘಟ್ಟವಾಗಿರುವ ರಾಮ ಮಂದಿರ ಉದ್ಘಾಟನಾ ಕಾರ‍್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಜನವರಿ ೧೬ ರಿಂದಲೇ ಆರಂಭ ಆಗಿವೆ. ವೈದಿಕ ಸಂಪ್ರದಾಯದ ಪ್ರಕಾರ ಹಲವು ರೀತಿಯ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಜನವರಿ ೨೨ ರಂದು ರಾಮ ಲಲ್ಲಾ ಪ್ರಾಣ ಪ್ರತಿಷ್ಟಾಪನೆ ಮಾಡಲಾಗುತ್ತದೆ.
ಸಾಂಸ್ಕೃತಿಕ ನಗರ ಮೈಸೂರು ಒಂದಲ್ಲ ಒಂದು ವಿಶೇಷತೆ ನೀಡುತ್ತಾ ಬಂದಿದೆ. ಮೈಸೂರಿನ ಕಲ್ಲು, ಮೈಸೂರಿನವರೇ ಕೆತ್ತನೆ ಮಾಡಿರುವುದು ವಿಶೇಷದ ಜೊತೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾಮಹೇಶ್ ಅವರು ಕೂಡ ಅಯೋಧ್ಯ ರಾಮ ಹೆಸರಿನಲ್ಲಿ ವಿಶಿಷ್ಟ ರೀತಿಯಲ್ಲಿ ಅಲ್ಬಂ ಹಾಡು ಹಾಡಿ ಹೊರತಂದಿದ್ದಾರೆ.

ಅಯೋದ್ಯ ರಾಮ ಅಲ್ಬಂ ಸಾಂಗ್ ನ್ನು ಶ್ರೀ ರಾಮನ ಪಾತ್ರದಾರಿಯ ಮೂಲಕ ನೂರಾರು ನೃತ್ಯದ ಮೂಲಕ ಚಿತ್ರೀಕರಣ ಮಾಡಿದ್ದಾರೆ. ಸಾಂಗ್ ಚಿತ್ರೀಕರಣ ಮೇಲೂಕೋಟೆಯಲ್ಲಿ ಮಾಡಿದ್ದು ಭಕ್ತಿ ಪೂರ್ವಕ ಸಾಂಗ್ ವಿಶೇಷ ಮೆರಗು ನೀಡಿದ್ದು ಈಗಾಗಲೇ ಯೂಟೂಬ್ ನಲ್ಲಿ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಶ್ರೀರಾಮ ಅಪ್ಪಟ ಭಕ್ತ ವೀರಾಂಜನೆಯಸ್ವಾಮಿಯ ಭಕ್ತರಾಗಿದ್ದು, ಈ ಅಲ್ಬಂ ಸಾಂಗ್ ಹಾಡಿರುವ ತಮ್ಮ ಪತ್ನಿ ಅನೀತಾಮಹೇಶ್ ಅವರಿಗೆ ಸಂಪೂರ್ಣ ಸಹಕಾರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.