Thursday, April 10, 2025
Google search engine

Homeಅಪರಾಧಎರಡು ತಿಂಗಳಲ್ಲಿ ಜಿಲ್ಲಾದ್ಯಂತ ಕಳುವಾಗಿದ್ದ 100 ಮೊಬೈಲ್ ಗಳ ಪತ್ತೆ

ಎರಡು ತಿಂಗಳಲ್ಲಿ ಜಿಲ್ಲಾದ್ಯಂತ ಕಳುವಾಗಿದ್ದ 100 ಮೊಬೈಲ್ ಗಳ ಪತ್ತೆ

ಮೈಸೂರು: ಮೈಸೂರು ಜಿಲ್ಲೆಯ ಅತ್ಯಂತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ 18 ಲಕ್ಷ ರೂ. ಮೌಲ್ಯದ 100 ಮೊಬೈಲ್ ಫೋನ್ ಗಳನ್ನು ಜಿಲ್ಲಾ ಸೆನ್ ಠಾಣೆ ಪೋಲೀಸರು ಪತ್ತೆ ಮಾಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹೊಸದಾಗಿ ಜಾರಿಗೆ ತಂದಿರುವ ಸಿ.ಇ.ಪಿ.ಆರ್ ಪೋರ್ಟಲ್ ಮೂಲಕ ಮೊಬೈಲ್ ಗಳನ್ನ ಪತ್ತೆ ಮಾಡಲಾಗಿದ್ದು, ಆಯಾ ಠಾಣೆಗಳಲ್ಲಿ ಬಾರಿಸುದಾರರಿಗೆ ಮೊಬೈಲ್ ಗಳನ್ನು ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಕಳೆದ 2 ತಿಂಗಳಿಂದೀಚೆಗೆ ಮಾತನಾಡುತ್ತಿದ್ದಾಗ ಕಿತ್ತುಕೊಂಡು ಹೋಗಿದ್ದ, ಮರೆತು ಬಿಟ್ಟು ಹೋಗಿದ್ದ ಹಾಗೂ ಕಳವು ಮಾಡಿದ್ದ 100 ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಜಿಲ್ಲಾ ಸೆನ್ ಠಾಣೆ ಇನ್ಸ್ಪೆಕ್ಟರ್ ಪುರುಷೋತ್ತಮ್ ನೇತೃತ್ವದ ತನಿಖಾ ತಂಡವು ತಂತ್ರಜ್ಞಾನ ಬಳಸಿಕೊಕೊಂಡು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಗತ್ಯ ದಾಖಲೆ ಪರಿಶೀಲಿಸಿ ವಾರಸುದಾರರವರಿಗೆ ಆಯಾ ಪೋಲಿಸ್ ಠಾಣೆಗಳಲ್ಲಿ ಫೋನ್ ಗಳನ್ನು ವಾಪಸ್ ನೀಡಿದ್ದಾರೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular