ಹನೂರು: ಕಾಡಂಚಿನ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಪಟ್ಟಣದ ಸೆಸ್ಕಮ್ ಕಚೇರಿ ಮುಂಭಾಗ ದಂಟಳ್ಳಿ ಗ್ರಾಮದ ರೈತರು ಆರೋಪಿದರು.
ಹನೂರು ತಾಲೂಕಿನ ಅರಣ್ಯ ದಂಚಿನಲ್ಲಿರುವ ಗ್ರಾಮಕ್ಕೆ ಸಕಾಲಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಇರುವ ಬಾವಿ ಲೈನ್ ಸಹ ಕಡಿಮೆ ಅವಧಿಯಲ್ಲಿ ಕರೆಂಟ್ ಇರುತ್ತಿದ್ದು, ನಿರಂತರ ಜ್ಯೋತಿ ಇಲ್ಲವಾಗಿದೆ. ಇದರಿಂದ ರೈತರು ಜಮೀನುಗಳಿಗೆ ಹಾಕಲಿದ್ದ ಪಸಲಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗದೆ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ. ರಾತ್ರಿ ವೇಳೆಯಲ್ಲಿ ಆನೆ ಸೇರಿದಂತೆ ಒಂದನೇ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರ ಒಟ್ಟುಗೂಡಿ ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಂಟಳ್ಳಿ ಗ್ರಾಮದ ಮುಖಂಡರಾದ ದೇವರಾಜು, ಶಿವು, ಶಿವಣ್ಣ, ವೆಂಕಟೇಗೌಡ, ಮಾದೇವಸ್ವಾಮಿ, ಮಂಜುನಾಥ್, ಗೌಡ, ಮಾದೇವಪ್ಪ ಮತ್ತಿತರರು ಇದ್ದರು.