ಪಿರಿಯಾಪಟ್ಟಣ: ಪಟ್ಟಣದ ಹೊರವಲಯದ ಕಿರನಲ್ಲಿ ಗೇಟ್ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಅನ್ನಪೂರ್ಣ ಹೈಟೆಕ್ ರೈಸ್ ಮಿಲ್ ಅನ್ನು ಆ.14 ರ ಬುಧವಾರ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಉದ್ಘಾಟಿಸಲಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಆಶ್ರಯ ಸಮಿತಿ ಅಧ್ಯಕ್ಷರು ಕೆಪಿಸಿಸಿ ಸದಸ್ಯರು ಸಚಿವರ ಪುತ್ರರಾದ ನಿತಿನ್ ವೆಂಕಟೇಶ್ ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀ ಅನ್ನಪೂರ್ಣ ಹೈಟೆಕ್ ರೈಸ್ ಮಿಲ್ ಮಾಲೀಕರಾದ ಎಸ್.ಎನ್ ರಾಜೇಶ್ವರಿ ಮತ್ತು ಕೆ.ಆರ್ ಸಂಜಯ್ ಕೋರಿದ್ದಾರೆ.