ಮೈಸೂರು: ಮೈಸೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ವಿದ್ಯಾರ್ಥಿ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದಉದ್ಘಾಟನೆಯನ್ನು ಸೆಪ್ಟೆಂಬರ್೨೯ರಂದು ಕಲಾಮಂದಿರದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆಎಂದು ಸಂಘದಗೌರವಅಧ್ಯಕ್ಷ್ಷರಾದ ಎಂ ರಾಮಯ್ಯನವರು ತಿಳಿಸಿದರು.
ಬಿ.ಸಿ.ಎಂ ಹಳೆಯ ವಿದ್ಯಾರ್ಥಿಗಳ ಸಂಘದ ಪೂರ್ವಭಾವಿ ಸಭೆಯಲ್ಲಿ ಸಂಘದಅಧ್ಯಕ್ಷರು ಹಾಗು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯೂ ಆದ ಬಿ.ಶಿವಸ್ವಾಮಿ ಮಾತನಾಡಿರಾಜ್ಯದಲ್ಲಿಯೇ ಪ್ರಥಮವಾಗಿ ಬಿ.ಸಿ.ಎಂ. ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮೈಸೂರಿನಲ್ಲಿಉದ್ಗಾಟನೆ ಮಾಡುತಿದ್ದೇವೆ. ಬಿ,ಸಿ.ಎಂ. ಹಾಸ್ಟಲ್‌ನ ಪಿತಾಮಹಡಿ.ದೇವರಾಜಅರಸು ಹಾಗು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಬ್ಬರು ಸಹ ಮೈಸೂರುಜಿಲ್ಲೆಯವರಾಗಿರುವುದುನಮ್ಮೆಲ್ಲರಿಗೂಹೆಮ್ಮೆಯ ವಿಷಯವಾಗಿದೆ. ಸಮಾರಂಭದಲ್ಲಿಜಿಲ್ಲಾಉಸ್ತುವಾರಿ ಸಚಿವರು,ಜಿಲ್ಲೆಯ ಶಾಸಕರುಗಳು, ಸಚಿವರುಗಳು, ಭಾಗವಹಿಸುವುದರಿಂದಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ಮಾಡಬೇಕು. ಬಿ.ಸಿ.ಎಂ ಹಾಸ್ಟಲ್‌ನ ಹಳೇಯ ವಿದ್ಯಾರ್ಥಿಗಳು, ನಿವೃತ್ತ ನೌಕರರು, ಹಾಸ್ಟಲ್ ವಿದ್ಯಾರ್ಥಿಗಳನ್ನು ಆಹ್ವಾನಿಸಬೇಕು.ಆದ್ದರಿಂದ ವಿವಿಧ ಸಮಿತಿಗಳನ್ನು ಮಾಡುತ್ತಿದ್ದೇವೆ. ಅದರಲ್ಲಿಸ್ವಾಗತ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಆಹ್ವಾನ ಪತ್ರಿಕೆ ಸಮಿತಿ, ಮಾಧ್ಯಮ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಿದ್ದೇವೆ, ಆಯಾ ಸಮಿತಿಯಅಧ್ಯಕ್ಷರು ಹಾಗು ಪದಾಧಿಕಾರಿಗಳು ಅವರಿಗೆ ವಹಿಸಿರುವ ಜವಾಬ್ಧಾರಿಯನ್ನು ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಹಾಗು ಸಂಘದ ಉಪಾಧ್ಯಕ್ಷಆರ್.ಮಹಾದೇವ್, ಕಾರ್ಯದರ್ಶಿ ಬಿ.ಪಿ.ರಾಜೇಶ್, ಖಜಾಂಚಿರುಕ್ಮಾಂಗದ,ಕೆ. ಜಂಟಿಕಾರ್ಯದರ್ಶಿ ರಮೇಶ್‌ಗೌಡ, ತಹಸಿಲ್ದಾರ್ ಮುರಡಗಳ್ಳಿ ಮಂಜುನಾಥ್, ಅಹಿಂದಜವರಪ್ಪ, ಡಾ. ಮಾಲೇಗೌಡ, ಪ್ರಕಾಶ್, ಶಿವಕುಮಾರ್, ಹಾಗು ಸದಸ್ಯರು ಹಾಜರಿದ್ದರು.