ಚಾಮರಾಜನಗರ: ಭಾರತ ಆಧ್ಯಾತ್ಮಿಕ ದೇಶವಾಗಿದೆ. ಹಬ್ಬಗಳ ಮೂಲಕ ಸಂಸ್ಕೃತಿಯನ್ನು ಸಾರುವ ದೇಶ. ಸರ್ವರಲ್ಲೂ ಸಾಮರಸ್ಯ, ಸ್ವಚ್ಛತೆ, ಆತ್ಮೀಯತೆಯನ್ನು ಬೆಳೆಸುವಲ್ಲಿ ತುಂಬಾ ಪ್ರಭಾವ ಬೀರುತ್ತದೆ ಎಂದು ಮೈಸೂರು ಉಪವಲಯದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು ಆದ ಬಿಕೆ ಲಕ್ಷ್ಮೀಜಿ ರವರು ತಿಳಿಸಿದರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂದೆ ನಡೆಯುತ್ತಿರುವ ದ್ವಾದಶ ಜ್ಯೋತಿರ್ಲಿಂಗ ದರ್ಶನ ಉದ್ಘಾಟನೆಯ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯ ಇಂದು ಜಗತ್ತಿನಲ್ಲಿ. 147 ದೇಶಗಳಲ್ಲಿ ಕಾರ್ಯ ನಿರ್ವಹಿಸಿ ಮಾನವ ಕುಲಕ್ಕೆ. ಶಾಂತಿ ಸಂದೇಶ ,ಯೋಗ ಜೀವನವನ್ನು ರಾಜ ಯೋಗ ಧ್ಯಾನ ಕೆಂದ್ರಗಳನ್ನು ಸ್ಥಾಪಿಸಿ ಮಾನವ ಕುಲಕ್ಕೆ ಶ್ರೇಷ್ಠ ಕೊಡುಗೆ ನೀಡಿದೆ.ಯೋಗ ಜೀವನದ ಮೂಲಕ ಜ್ಞಾನದ ಜೀವನ ನಡೆಸಿ ಸತ್ಯ ಹೃದಯ ,ಸರಳ ವಿಧಾನದ ಮೂಲಕ ದುಷ್ಕರ್ಮವನ್ನು ಹೋಗಲಾಡಿಸಬೇಕು.
ಮನುಷ್ಯ ವ್ಯರ್ಥ ಚಿಂತನೆ ಬಿಟ್ಟು ಸಕಾರಾತ್ಮಕ ಚಿಂತನೆ, ದೈವ ಸ್ಮರಣೆಯ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಟಸಿದ ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಮಾತನಾಡಿ ಚಾಮರಾಜೇಶ್ವರ ದೇವಸ್ಥಾನದ ಮುಂದೆ ದ್ವಾದಶ ಲಿಂಗಗಳ ದರ್ಶನದ ಭಾಗ್ಯ ಕರುಣಿಸುವ ಮೂಲಕ ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ತೆ ನಗರದ ಜನರಿಗೆ ಉತ್ತಮ ಕಾರ್ಯವನ್ನು ಒದಗಿಸಿದೆ. ಜನರು ದ್ವಾದಶ ಲಿಂಗಗಳ ದರ್ಶನ ಹಾಗೂ ಚಿಂತನೆಯ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಕೊಳ್ಳೇಗಾಲ ಮುಖ್ಯ ಸಂಚಾಲಕರಾದ ಪ್ರಭಾಮಣೀಜೀ ಮಾತನಾಡಿ ದ್ವಾದಶ ಲಿಂಗಗಳ ದರ್ಶನದಿಂದ ಮನಸ್ಸಿಗೆ ಆನಂದ , ಸಂತೋಷ,ಹಾಗೂ ಭಕ್ತಿಯನ್ನು ಹೆಚ್ಚಿಸಿ ನೆಮ್ಮದಿಯ ಜೀವನ ನಡೆಸಲು ಸ್ಪೂರ್ತಿ ತುಂಬುತ್ತದೆ ಎಂದರು.
ಬಿಳಿಗಿರರಂಗನ ಬೆಟ್ಟದ ವಿಶ್ವಶಾಂತಿ ಆಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಮಾತನಾಡಿ ಶಿವರಾತ್ರಿಯಲ್ಲಿ ಶಿವನ ಧ್ಯಾನದ ಮೂಲಕ ಅಂತರಂಗದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಶಿವನ ದರ್ಶನ, ಅವತಾರದ ಹಿನ್ನಲೆಯ ಇತಿಹಾಸ ವನ್ನೂ ಅರಿಯಬೇಕು. ಯೋಗ ಧ್ಯಾನದ ಸಂದೇಶಗಳು ನಮ್ಮನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಎಸ್ ಬಾಲರಾಜು ಮಾತನಾಡಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಂತಿಯ ಸಂದೇಶ, ಜೀವನ ಮೌಲ್ಯವನ್ನು ಜಗತ್ತಿಗೆ ಸಾರುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ.ಮಾತನಾಡಿ ಇತಿಹಾಸದಲ್ಲಿ.ಮೊದಲಿಗೆ ದ್ವಾದಶ ಲಿಂಗಗಳ ದರ್ಶನ ಹಾಗೂ ಇತಿಹಾಸ ತಿಳಿಯಲು ಭವ್ಯವಾಗಿ ರೂಪಿಸಿರುವುದು ನಗರದ ಜನರ ಪುಣ್ಯವೆಂದರು.ಜನತೆ ಶಿವ ಧ್ಯಾನದ ಜೊತೆಗೆ ಅಂತರಂಗ ತಿಳಿಯುವ ಮೂಲಕ ಸನ್ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳಿ ಎಂದರು.
ಸರ್ವರನ್ನು ಚಾಮರಾಜನಗರದ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು,ಸ್ವಾಮಿ ವಿವೇಕಾನಂದ ರಾಷ್ಟ್ರ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀಯವರು ಸರ್ವರನ್ನು ಸ್ವಾಗತಿಸಿದರು. ಉಪ ತಹಸಿಲ್ದಾರರಾದ ಗಿರಿಜಕ್ಕ ಮಾತನಾಡಿ ರಾಜಯೋಗ ಧ್ಯಾನವು ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಮೊದಲು ಸೇವಾಕೇಂದ್ರದಿಂದ ದೇವಸ್ಥಾನ ದವರೆಗೆ ರಾಜಯೋಗ ವಿದ್ಯಾರ್ಥಿಗಳು ಹಾಗೂ ಬ್ರಹ್ಮಾಕುಮಾರ ಕುಮಾರಿಯರು ಶಾಂತಿ ಶೋಭಾಯಾತ್ರೆ ನಡೆಸಿಕೊಟ್ಟರು. ಓಂಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ, ಸುರೇಶ್ ನಾಗ್ , ನಂಜುಂಡಸ್ವಾಮಿ, ನಾರಾಯಣಶೆಟ್ಟಿ, ಶ್ರೀನಿವಾಸ, ತಾಂಡವಮೂರ್ತಿ, ಡಾಪರಮೇಶ್ವರಪ್ಪ ,ಸುರೇಶ್ ಗೌಡ್ರು ಹಾಜರಿದ್ದರು. ಪುಣ್ಯ ದರ್ಶನವು ಪ್ರತಿನಿತ್ಯ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ದಿನಾಂಕ 13 ರವರೆಗೆ ಉಚಿತವಾಗಿ ತೆರೆದಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.
