ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಮ್ಮ ಸರ್ಕಾರ ಸಾರ್ವಜನಿಕರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದ್ದರು ಪಡೆಯಲು ಊರೂರು ಅಲೆಯಬೇಕಾದ ಪರಿಸ್ಥಿತಿ ಇರುವುದು ಶೋಚನೀಯ ಆಹಾರ ಇಲಾಖೆ ಇತ್ತ ಗಮನ ಹರಿಸಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಕುಪ್ಪೆ ಸಹಕಾರ ಸಂಘದ ವತಿಯಿಂದ ಮುದ್ದನಹಳ್ಳಿ ಗ್ರಾಮದ ಪಡಿತರ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಸಾಂಕೇತಿಕವಾಗಿ ಪಡಿತರ ವಿತರಣೆ ಮಾಡಿ ಮಾತನಾಡಿದ ಅವರು ಕ್ಷೇತ್ರದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ ಕೆಸ್ತೂರಿನಿಂದ ಮುದ್ದನಹಳ್ಳಿ ಗ್ರಾಮಕ್ಕೆ ಬರುವ ರಸ್ತೆ, ಬಸವೇಶ್ವರ ದೇವಸ್ಥಾನ ಅಭಿವೃದ್ಧಿ, ಈ ಭಾಗಕ್ಕೆ ಪಶು ಆಸ್ಪತ್ರೆ ಬಹುದಿನಗಳ ಬೇಡಿಕೆಯಾಗಿರುವ ಮುದ್ದನಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವಾಗಿ ಮಾಡಲು ಸದ್ಯದಲ್ಲೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನನ್ನ ರಾಜಕೀಯ ಜೀವನ ಆರಂಭಗೊಳ್ಳಲು ಆಶೀರ್ವಾದ ಮಾಡಿದ ಸಾಲಿಗ್ರಾಮ ಜಿ ಪಂ ನ ಕುಪ್ಪೆ, ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಪ್ರಮುಖವಾಗಿದ್ದು ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆಗೆ ನಾನು ಸದಾ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಾದೇವಸ್ವಾಮಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಕಲ್ಯಾಣಮ್ಮ, ಎಂ ಡಿ ಸಿ ಸಿ ಬ್ಯಾಂಕ್ ಮ್ಯಾನೇಜರ್ ಪ್ರತಾಪ್, ಮೇಲ್ವಿಚಾರಕರಾದ ದಿನೇಶ್,ತಾಪಂ ಮಾಜಿ ಸದಸ್ಯ ಪ್ರಭಾಕರ್, ಗ್ರಾಪಂ ಮಾಜಿ ಅಧ್ಯಕ್ಷ ಕುಳ್ಳೇಗೌಡ, ತಿಮ್ಮೇಗೌಡ,ಮಾಜಿ ಉಪಾಧ್ಯಕ್ಷ ತಮ್ಮಯ್ಯ, ಆಹಾರ ನಿರೀಕ್ಷಕರಾದ ಸುರೇಶ್, ಕುಮಾರ್, ಗ್ರಾಮದ ಮುಖಂಡರಾದ ಕಾಳೇಗೌಡ, ಚಿಬಕ್ಕಹಳ್ಳಿ ಬಸವರಾಜ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಪುನೀತ್, ಸಂಘದ ಕಾರ್ಯದರ್ಶಿ, ಪುನೀತ್, ಸಹಾಯಕ ಜಗದೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.