Sunday, April 20, 2025
Google search engine

Homeರಾಜ್ಯಸುದ್ದಿಜಾಲನಾಳೆ ರೈತಸಂಘ ಜಯಪುರ ಹೋಬಳಿ ಘಟಕ ಉದ್ಘಾಟನೆ

ನಾಳೆ ರೈತಸಂಘ ಜಯಪುರ ಹೋಬಳಿ ಘಟಕ ಉದ್ಘಾಟನೆ

ಮೈಸೂರು : ಇಂಗಲಗುಪ್ಪೆ ಕೃಷ್ಣಗೌಡ ಅವರ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ (ರೈತಬಣ)ದ ಮೈಸೂರು ತಾಲ್ಲೂಕು ಜಯಪುರ ಹೋಬಳಿ, ಜಯಪುರ ಘಟಕದ ಉದ್ಘಾಟನಾ ಸಮಾರಂಭವನ್ನು ಹೊಸಕೆರೆ ಗ್ರಾಮದಲ್ಲಿ ನಾಳೆ ದಿ. ೧೮ ರಂದು ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಏರ್ಪಡಿಸಲಾಗಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಮ್ಮ ಜಮೀನುಗಳನ್ನು ನೀಡಿ ಇನ್ನೂ ಕೂಡ ಪರಿಹಾರ ಪಡೆದಿಲ್ಲದಿರುವ ಹಲವಾರು ರೈತರು ಭಾಗವಹಿಸಲಿದ್ದು, ರೈತಸಂಘದಿಂದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು.

ಸಮಾರಂಭದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂರಾರು ರೈತರು ಭಾಗವಹಿಸಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು
ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular