Sunday, April 20, 2025
Google search engine

Homeರಾಜ್ಯಮೇ 12 ರಂದು ಶ್ರೀ ನಾರಾಯಣ ಸಾಂಸ್ಕಾರಿಕ ವೇದಿ'ಯ ಸ್ವಂತ ನೂತನ ಕಚೇರಿ ಉದ್ಘಾಟನೆ

ಮೇ 12 ರಂದು ಶ್ರೀ ನಾರಾಯಣ ಸಾಂಸ್ಕಾರಿಕ ವೇದಿ’ಯ ಸ್ವಂತ ನೂತನ ಕಚೇರಿ ಉದ್ಘಾಟನೆ

ಮಂಗಳೂರು (ದಕ್ಷಿಣ ಕನ್ನಡ): ‘ಶ್ರೀ ನಾರಾಯಣ ಸಾಂಸ್ಕಾರಿಕ ವೇದಿ’ಯ ಸ್ವಂತ ನೂತನ ಕಚೇರಿಯು ಮಂಗಳೂರಿನ ಸ್ಟೇಟ್‌ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯ ನಾಲ್ಕೂ ಸೆಂಟರ್‌ ಮೂರನೇ ಮಹಡಿಯಲ್ಲಿ ಮೇ 12ರಂದು ಉದ್ಘಾಟನೆಗೊಳಲ್ಲಿದೆ ಎಂದು ಸಂಘದ ಕಾರ್ಯದರ್ಶಿ ಮೋಹನ್ ಮಂಗಳೂರಲ್ಲಿ‌ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಂಸ್ಕಾರಿಕ ವೇದಿ 13 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ನಾಡಿನಾದ್ಯಂತ ಸಾರುತ್ತಾ ಬಂದಿದೆ. ಮಲೆಯಾಳಿಗಳಿಗೆ ಇದೊಂದು ಮಾಹಿತಿ ಕೇಂದ್ರವಾಗಿ ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಹಲವಾರು ವಿಚಾರಗಳಲ್ಲಿ ಮಾರ್ಗದರ್ಶನ ನೀಡುತ್ತಿದೆ. ಶ್ರೀ ನಾರಾಯಣ ಸಾಂಸ್ಕರಿಕ ವೇದಿ ಬಾಡಿಗೆ ಕಚೇರಿಯಲ್ಲಿ ಸದ್ಯ ಸೇವೆಯನ್ನು ನೀಡುತ್ತಿದ್ದು, ಇದೀಗ ಸ್ಟೇಟ್ ಬ್ಯಾಂಕ್ ಬಳಿ ಸ್ವಂತ ಕಟ್ಟಡವನ್ನು ಹೊಂದಿದೆ ಎಂದವರು ತಿಳಿಸಿದರು.
ಕೇರಳ ವರ್ಕಳದ ಶಿವಗಿರಿ ಮಠದ ಶ್ರೀ ಸ್ವಾಮಿ ಅಸಂಗಾನಂದ ಗಿರಿ ನೂತನ ಕಚೇರಿಯನ್ನು ಉದ್ಘಾಟಿಸುವರು. ಇಡುಕ್ಕಿಯ ಖ್ಯಾತ ವಾಗಿ ಡಾ.ಸನಲ್ ಕುಮಾರ್ ಗುರುಸಂದೇಶ ನೀಡಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ರಾಜನ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ರವಿಶಂಕರ್ ಮಿಜಾರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

RELATED ARTICLES
- Advertisment -
Google search engine

Most Popular