ಮೈಸೂರು: ಅಯೋದ್ಯೆ ಶ್ರೀ ರಾಮಲಲ್ಲಾ ಪ್ರತಿಷ್ಠಾಪನಾ ಅಂಗವಾಗಿ ಮೈಸೂರು ವಕೀಲರ ಸಂಘದ ಗಣಪತಿ ದೇವಸ್ಥಾನದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು 1008 ದೀಪ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇತರೆ ಎಲ್ಲಾ ನ್ಯಾಯಾದೀಶರ ಹಾಗೂ ವಕೀಲ ಬಂದುಗಳು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಶ್ರೀ ರಾಮನಿಗೆ ಭಕ್ತಿ ಪೂರ್ವಕ ಪೂಜೆ, ರಾಮ ಭಜನೆ ಮಾಡಿದರು. ಬಳಿಕ ನೆರೆದಿದ್ದವರಿಗೆ ಪ್ರಸಾದ ವಿನಯೋಗ ಮಾಡಲಾಯಿತು.