Friday, April 18, 2025
Google search engine

Homeರಾಜ್ಯಸುದ್ದಿಜಾಲಚಿಕ್ಕಕೊಪ್ಪಲು‌ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಮಲೆ ಮಹದೇಶ್ವರ ದೇವಾಲಯ ಉದ್ಘಾಟನೆ

ಚಿಕ್ಕಕೊಪ್ಪಲು‌ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಮಲೆ ಮಹದೇಶ್ವರ ದೇವಾಲಯ ಉದ್ಘಾಟನೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸುಮಾರು 15 ಲಕ್ಷ ರೂಪಾಯಿ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಮಲೆಮಹದೇಶ್ವರ ವಯ ದೇವಾಲಯ ಸೋಮವಾರ ಧಾರ್ಮಿಕ ಪೂಜಾ ಕಾರ್ಯದೊಂದಿಗೆ ಲೋಕಾರ್ಪಣೆಗೊಂಡಿತು.

ಚಿಕ್ಕಕೊಪ್ಪಲು ಗ್ರಾಮದ ಸಿ.ಆರ್.ಮಂಜುನಾಥ್ ಮತ್ತು ಸಿ.ಆರ್.ಪಾರ್ಥ ಸಹೋದರರು ದೇವರ ಅನುಗ್ರಹದ ಹಿನ್ನಲೆಯಲ್ಲಿ ನಿರ್ಮಿಸಿರುವ ಈ ಮಲೆ ಮಹದೇಶ್ವರ ದೇವಾಲಯದಲ್ಲಿ‌ ದೇವರ ಪ್ರತಿಷ್ಠಾಪನೆ ಕಾರ್ಯ ಸಾವಿರಾರು ಮಂದಿಯ ಸಮ್ಮುಖದಲ್ಲಿ ನೇರವೇರಿತು.

ದೇವಾಲಯದ ಉದ್ಘಾಟನೆಯ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಗ್ರಾಮದ ಕಂಬಮ್ಮ ದೇವಾಲಯದಲ್ಲಿ‌ ಪೂಜೆ ಸಲ್ಲಿಸಿದ ನಂತರ ಗ್ರಾಮದ ಹೊರವಲಯದಲ್ಲಿ ಇರುವ ಬೆಳವಲದಮ್ಮ ದೇವಾಲಯದ ಬಳಿಯ ಮಲ್ಲಮ್ಮನ ಕೊಳದಿಂದ ಕಳಸವನ್ನು ವಿಶೇಷ ಪೂಜೆ ಮಾಡಿ ದೇವಾಯಲದ ಅವರಣಕ್ಕೆ ತಂದ ನಂತರ ಕಳಸ ಹೊತ್ತ ಮಹಿಳೆಯರಿಗೆ ಮಮತಾಮಂಜುನಾಥ್, ಗಾಯಿತ್ರಿಪಾರ್ಥ ಅವರು ಮುತ್ತೈದೆ ಪೂಜೆ ನಡೆಸಿಕೊಟ್ಟರು.

ಬಳಿಕ ರಾಮನಾಥಪುರದ ಸುಬ್ರಮಣ್ಯ ದೇವಾಲಯದ ಅಧ್ಯಕ್ಷರಾಗಿದ್ದ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ವಿವಿಧ ವೇದ ಘೋಷದ ಪೂಜೆಯೊಂದಿಗೆ ಗಣಪತಿ ಪೂಜೆ,ವಾಸ್ತು ಹೋಮ, ಗಣಹೋಮ ನಂತರ ಗೋವನ್ನು ದೇವಾಲಯಕ್ಕೆ ಪ್ರವೇಶ ಮಾಡಿಸಿ ಕಳಸ ಸ್ಥಾಪನೆ ಮಾಡಿ ದೇವಾಲಯವನ್ನು ಪ್ರವೇಶ ಮಾಡಲಾಯಿತು.

ಸೋಮವಾರ ಬೆಳಿಗ್ಗೆ 5 ಗಂಟೆಗೆ ಸಲ್ಲಿದ ಶುಭಲಗ್ನ‌ ಕನ್ಯಾದಲ್ಲಿ ವಿವಿಧ ಪೂಜಾ ಪುರಸ್ಕಾರದ ಬಳಿಕ ಶ್ರೀ ಮಲೆ ಮಹದೇಶ್ವರ ದೇವರ ಪ್ರತಿಷ್ಠಾಪನೆಯನ್ನು ಮಾಡಿದ ನಂತರ ರುದ್ರ ಜೋಡು ಮತ್ತು‌ ಪೂರ್ಣಾಹುತಿ ಕಾರ್ಯಕ್ರಮನ್ನು ನಡೆಸಿ ನೂತನ ದೇವಾಲಯದ ಗೋಪುರ ಪ್ರತಿಷ್ಠಾಪನೆಯನ್ನು ಮಾಡಲಾಯಿತು
ಬಳಿಕ ದೇವಾಲಯದಲ್ಲಿ ಮಹಾ ಮಂಗಳಾರತಿ ಕಾರ್ಯಕ್ರಮವನ್ನು‌ ಮಾಡಿದ ಹಾಜರಿದ್ದ ಭಕ್ತಾಧಿಗಳು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು ಆನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರಿಗೆ ಅನ್ನ ಸಂತಪರ್ಣೆಯನ್ನು‌ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರಾಮೇಗೌಡ, ಮಹದೇವಮ್ಮ, ಪರುಶುರಾಮೇಗೌಡ, ಸಿ.ಕೆ.ಸ್ವಾಮೀಗೌಡ, ಕೃಷ್ಣೇಗೌಡ, ಸಿ.ಟಿ. ಸ್ವಾಮಿ, ತೊಟ್ಟಲೇಗೌಡ, ನಿವೃತ್ತ ಶಿಕ್ಷಕ ಸಿ.ಟಿ.ಧರ್ಮಪಾಲ್, ಸಿ.ಬಿ.ಲೋಕೇಶ್.ಡಿ.ಪುನೀತ್, ಸಿ.ಕೆ.ಆರ್‌.ಮನು, ಪೂಜಾರಿ ರಾಮೇಗೌಡ, ಕೊಲಕಾರ ಗಲ್ಲಿ ಮಹದೇವ್, ರಾಮಚಂದ್ರ,ಸಿದ್ದರಾಜು, ಸಾಗರ್, ಸಿ.ಪಿ.ಮಧು, ಸಿ.ಪಿ.ಗಿರೀಶ್, ಸಚಿನ್ ಕುಪ್ಪೆ, ಎಳನೀರ ಕುಮಾರ್, ಕುಡುಕುರು ಶನಿದೇವರ ಅರ್ಚಕ ಸಿದ್ದಯ್ಯ , ತ್ತುತ್ತಾಳಮ್ಮದೇವಾಲಯದ ಅರ್ಚಕ ಸಿ.ಎಂ.ಮಂಜು, ಕಂಬಮ್ಮ‌ ದೇವಾಲಯದ ಅರ್ಚಕ ಚಿರಂತ್,ಶೆಟ್ಟಹಳ್ಳಿ ಮಲ್ಲೇಶ್, ಕರ್ನಾಟಕ ಸಚಿವಾಲಯದ ಹಿರಿಯ ಸಹಾಯಕ ಸಿ.ಟಿ.ಮಂಜುನಾಥ್, ಕುಪ್ಪೆ ಸಹಕಾರ ಸಂಘದ ಸಹಾಯಕ ಸಿ.ಜಿ.ಜಗನ್ನಾಥ್, ಶಿಕ್ಷಕ ಪುಟ್ಟಸ್ವಾಮಿ ನಿವೃತ್ತ ಶಿಕ್ಷಕ ಕಾಳೇಗೌಡ, ಸರ್ವೆಯರ್ ಬಸವರಾಜು, ಕಟ್ಟೆಕೊಪ್ಫಲು ಗೋವಿಂದಣ್ಣ ಕುಪ್ಪೆ ಉಮೇಶ್ ರೆಡ್ಡಿ,ಸಣ್ಣಮಾದೇವು, ಶಿವರಾಜನಾಯಕ್ , ಹರ್ಷಿತ್
ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular