Friday, April 18, 2025
Google search engine

HomeUncategorizedರಾಷ್ಟ್ರೀಯಸ್ಪೇನ್ ಪ್ರಧಾನಿ, ನರೇಂದ್ರ ಮೋದಿಯಿಂದ ಟಾಟಾ ಗ್ರೂಪ್​ ನ ಮಿಲಿಟರಿ ವಿಮಾನದ ಫ್ಯಾಕ್ಟರಿ ಉದ್ಘಾಟನೆ

ಸ್ಪೇನ್ ಪ್ರಧಾನಿ, ನರೇಂದ್ರ ಮೋದಿಯಿಂದ ಟಾಟಾ ಗ್ರೂಪ್​ ನ ಮಿಲಿಟರಿ ವಿಮಾನದ ಫ್ಯಾಕ್ಟರಿ ಉದ್ಘಾಟನೆ

ವಡೋದರಾ: ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್​ನ ವಡೋದರಾದಲ್ಲಿ ಚಾಲನೆಗೊಂಡಿದೆ. ಟಾಟಾ ಏರ್ ​ಕ್ರಾಫ್ಟ್ ಕಾಂಪ್ಲೆಕ್ಸ್​ನಲ್ಲಿ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ.

ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಈ ಕಾಂಪ್ಲೆಕ್ಸ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್​ನ ಕ್ಯಾಂಪಸ್​ ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್​ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ. ಏರ್​ಬಸ್ ಸಂಸ್ಥೆ ತನ್ನ ದೇಶದಲ್ಲಿರುವ ತಯಾರಿಕಾ ಘಟಕದಿಂದ 16 ವಿಮಾನಗಳನ್ನು ತಯಾರಿಸಿ ಅಲ್ಲಿಂದಲೇ ನೇರವಾಗಿ ಭಾರತಕ್ಕೆ ಕಳುಹಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯ ವಡೋದರಾ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.

ಭಾರತ ಮತ್ತು ಸ್ಪೇನ್ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಪೆಡ್ರೋ ಸಾಂಚೆಜ್ ಅವರು ಟಾಟಾ ಘಟಕಕ್ಕೆ ಚಾಲನೆ ನೀಡುವ ಮುನ್ನ ಏರ್​ಪೋರ್ಟ್​ನಿಂದ ಎರಡೂವರೆ ಕಿಮೀ ದೂರ ರೋಡ್​ಶೋ ನಡೆಸಿದರು. ಈ ಘಟಕದ ಉದ್ಘಾಟನೆಯನ್ನು ಭಾರತೀಯ ವಾಯುಯಾನ ಉದ್ಯಮಕ್ಕೆ ಒಂದು ವಿಶೇಷ ದಿನ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

‘ಸಿ-295 ಯೋಜನೆಯು ಭಾರತೀಯ ಖಾಸಗಿ ಉದ್ಯಮಕ್ಕೆ ಮಹತ್ತರ ಮೈಲಿಗಲ್ಲಾಗಿದೆ. ಖಾಸಗಿ ಕಂಪನಿಯೊಂದು ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ ಮಿಲಿಟರಿ ವಿಮಾನವನ್ನು ತಯಾರಿಸಲಾಗುತ್ತಿದೆ. ಭಾರತದಲ್ಲಿ ಬೆಳವಣಿಗೆ ಹೊಂದುತ್ತಿರುವ ಏರೋಸ್ಪೇಸ್ ಇಕೋಸಿಸ್ಟಂಗೆ ಈ ಯೋಜನೆ ಒಳ್ಳೆಯ ಪುಷ್ಟಿ ನೀಡಲಿದೆ,’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular