Friday, April 4, 2025
Google search engine

Homeದೇಶತೆಲಂಗಾಣ ಸಚಿವಾಲಯ ಕಟ್ಟಡ ಆವರಣದಲ್ಲಿ ಗುಡಿ, ಚರ್ಚು, ಮಸೀದಿ ಉದ್ಘಾಟನೆ

ತೆಲಂಗಾಣ ಸಚಿವಾಲಯ ಕಟ್ಟಡ ಆವರಣದಲ್ಲಿ ಗುಡಿ, ಚರ್ಚು, ಮಸೀದಿ ಉದ್ಘಾಟನೆ

ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ನಿರ್ಮಿಸಲಾಗಿರುವ ನೂತನ ಸೆಕ್ರೆಟರಿಯೇಟ್ (ಸಚಿವಾಲಯ) ಆವರಣದಲ್ಲಿ ಇಂದು (ಶುಕ್ರವಾರ) ಮಂದಿರ, ಮಸೀದಿ ಹಾಗೂ ಚರ್ಚ್ ಅನ್ನು ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಏಕಕಾಲಕ್ಕೆ ಉದ್ಘಾಟಿಸಿದರು.

ರಾಜ್ಯಾಡಳಿತ ಕೇಂದ್ರವಾದ ಡಾ.ಬಿ.ಆರ್.ಅಂಬೇಡ್ಕರ್ ಸೆಕ್ರೆಟರಿಯೇಟ್ ಅನ್ನು ಏಪ್ರಿಲ್ ೩೦ರಂದು ಕೆಸಿಆರ್ ಉದ್ಘಾಟಿಸಿದ್ದರು. ಇದೇ ಸೆಕ್ರೆಟರಿಯೇಟ್ ಆವರಣದ ನೈಋತ್ಯ ದಿಕ್ಕಿನಲ್ಲಿ ನಲ್ಲಪೋಚಮ್ಮ ಅಮ್ಮಾವರಿ ದೇಗುಲದ ಜೊತೆಗೆ ಶಿವ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಒಂದು ಮಸೀದಿ ಹಾಗೂ ಚರ್ಚ್ ನಿರ್ಮಾಣ ಮಾಡಲಾಗಿದೆ. ಮೂರು ಧರ್ಮಗಳ ಪೂಜಾ ಸ್ಥಳಗಳ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಸಿಎಂ ಕೆಸಿಆರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಹಾಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿಯಲ್ಲಿ ರಾಜ್ಯಪಾಲೆ, ಸಿಎಂ ಭಾಗವಹಿಸಿ ಪೂಜೆ ಸಲ್ಲಿಸಿದರು. ನಂತರ ಪಕ್ಕದಲ್ಲಿರುವ ಚರ್ಚ್?ಗೆ ತೆರಳಿದ ತಮಿಳಿಸೈ ಮತ್ತು ಕೆಸಿಆರ್ ಕೇಕ್ ಕತ್ತರಿಸುವ ಮೂಲಕ ಚರ್ಚ್ ಉದ್ಘಾಟಿಸಿದರು. ಬಳಿಕ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

೨೦೨೧ರಲ್ಲಿ ಹಳೆಯ ಸೆಕ್ರೆಟರಿಯೇಟ್ ಕಟ್ಟಡಗಳ ನೆಲಸಮ ಸಂದರ್ಭದಲ್ಲಿ ಮಸೀದಿ ಮತ್ತು ದೇವಾಲಯಕ್ಕೆ ಹಾನಿಯಾಗಿತ್ತು. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಕೆಸಿಆರ್, ಆರಾಧನಾ ಸ್ಥಳಗಳ ಮೇಲೆ ಅವಶೇಷಗಳು ಬಿದ್ದಿದ್ದರಿಂದ ಹಾನಿಗೊಳಗಾಗಿವೆ ಎಂದು ಹೇಳಿದ್ದರು. ಇದೇ ವೇಳೆ, ಹಳೆ ಸೆಕ್ರೆಟರಿಯೇಟ್‌ನಲ್ಲಿ ಚರ್ಚ್ ಸೇವೆಗಳು ನಡೆಯುತ್ತಿದ್ದವು ಎಂದು ಕ್ರೈಸ್ತ ಮುಖಂಡರು ತಿಳಿಸಿದ್ದರು. ಇದರ ನಂತರ ಹೊಸ ಸೆಕ್ರೆಟರಿಯೇಟ್ ಆವರಣದಲ್ಲಿ ಮಸೀದಿ, ದೇವಾಲಯ, ಚರ್ಚ್ ನಿರ್ಮಿಸಲಾಗುತ್ತದೆ ಎಂದು ಕೆಸಿಆರ್ ಭರವಸೆ ನೀಡಿದ್ದರು.

RELATED ARTICLES
- Advertisment -
Google search engine

Most Popular