ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮಾಂತರ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದರಿಂದ ಜನರಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗಿ ಪರಸ್ಪರ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ಶುಕ್ರವಾರ ಆದಿಶಕ್ತಿ ಮಾವತ್ತೂರಮ್ಮನವರ ಭಕ್ತಾದಿಗಳ ದೇವರ ಮನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಮದ ಎಲ್ಲರೂ ಸೇರಿ ಉತ್ತಮ ಕೆಲಸ ಮಾಡಿದ್ದು ಇದು ಅಭಿನಂದನಾದ ಎಂದರು.
ಭಕ್ತಾದಿಗಳ ದೇವರ ಮನೆ ನಿರ್ಮಾಣ ಕಾಮಗಾರಿಗೆ ಶಾಸಕರ ನಿಧಿಯಿಂದ ಐದು ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಇದರ ಜೊತೆಗೆ ಪ್ರಮುಖ ರಸ್ತೆಗಳಿಗೂ ಹಣ ನೀಡಿದ್ದು ಮುಂದಿನ ವಾರ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು. ಗ್ರಾಮದ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ 40 ಲಕ್ಷ ಹಣ ನೀಡಿದ್ದು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಇದರ ಜತೆಗೆ ಮಾವತ್ತೂರಮ್ಮನವರ ದೇವಾಲಯ ಸಂಪರ್ಕ ರಸ್ತೆಗೂ ಹಣ ನೀಡುವುದಾಗಿ ಭರವಸೆ ನೀಡಿದರು.
ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್. ಬಸಂತ್ ನಂಜಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಸ್. ಮಹೇಶ್, ಗ್ರಾ.ಪಂ. ಉಪಾಧ್ಯಕ್ಷೆ ಭವ್ಯಶಂಕರ್, ಸದಸ್ಯರಾದ ಲೋಹಿತ್, ಸ್ಮಿತಾ ಮಹೇಂದ್ರ, ದೇವಯ್ಯ, ಚನ್ನಕೇಶವ, ಜ್ಯೋತಿ, ಮುಖ್ಯ ಯಜಮಾನ ಆದರ್ಶ ರಾಜೇಶ್ ಅರಸ್, ದೇವರ ಮನೆಯ ಮುಖ್ಯಸ್ಥರಾದ ತಿಮ್ಮೇಗೌಡ, ಡಯಟ್ ಉಪನ್ಯಾಸಕ ಕೆ.ವಿ. ಸುರೇಶ್, ಪಿಡಿಒ ಉಮೇಶ್, ಮುಖಂಡರಾದ ಕೆ.ಪಿ.ಸುಜಯ್ , ಎಂ.ಆರ್. ಸತೀಶ್, ಪುಟ್ಟಸ್ವಾಮೀಗೌಡ, ದೇವಿರಮ್ಮ, ಕೃಷ್ಣನಾಯಕ, ಹೇಮಂತ್ ಕುಮಾರ್, ಕರಿಯಯ್ಯ ಮತ್ತಿತರರು ಇದ್ದರು.