Friday, April 18, 2025
Google search engine

Homeಸ್ಥಳೀಯಮಾರ್ಚ್ 4 ರಂದು ಅಶೋಕಪುರಂ ರೈಲು ನಿಲ್ದಾಣದ ಉನ್ನತೀಕರಿಸಿದ ಸೌಲಭ್ಯಗಳ ಉದ್ಘಾಟನೆ

ಮಾರ್ಚ್ 4 ರಂದು ಅಶೋಕಪುರಂ ರೈಲು ನಿಲ್ದಾಣದ ಉನ್ನತೀಕರಿಸಿದ ಸೌಲಭ್ಯಗಳ ಉದ್ಘಾಟನೆ

ಮೈಸೂರು: ಅಶೋಕಪುರಂ ರೈಲು ನಿಲ್ದಾಣದಲ್ಲಿನ ಮೂಲಸೌಕರ್ಯ ಸೌಲಭ್ಯಗಳನ್ನು ನವೀಕರಿಸಲಾಗಿದ್ದು, ಮಾರ್ಚ್ 4 ರಂದು ಬೆಳಗ್ಗೆ 11.30ಕ್ಕೆ ಸಂಸದ ಪ್ರತಾಪ್ ಸಿಂಹ ಅವರು ನಿಲ್ದಾಣದ ಎರಡನೇ ಪ್ರವೇಶ ಸೇರಿದಂತೆ ನಿಲ್ದಾಣದಲ್ಲಿ ಉನ್ನತೀಕರಿಸಿದ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ.

ಹೆಚ್ಚುವರಿ ಪ್ಲಾಟ್‌ ಫಾರ್ಮ್‌ ಗಳು, ಹೊಸ ಎರಡನೇ ಪ್ರವೇಶ ಮತ್ತು ವಿಸ್ತರಿತ ವಾಹನ ನಿಲ್ದಾಣ ಸೌಲಭ್ಯಗಳಂತಹ ಸೌಲಭ್ಯ ವರ್ಧನೆಗಳೊಂದಿಗೆ ಪ್ರಯಾಣಿಕರ ಸಂಖ್ಯೆಯಲ್ಲಿನ ಭವಿಷ್ಯದ ಹೆಚ್ಚಳವನ್ನು ಸರಿಹೊಂದಿಸಬಹುದಾಗಿದೆ. ಸ್ಥಳೀಯ ಸಾರಿಗೆ ಜಾಲಗಳೊಂದಿಗೆ ಸುಧಾರಿತ ಸಂಪರ್ಕ ಮತ್ತು ತಡೆರಹಿತ ಚಲನಾ ಸೌಲಭ್ಯಗಳು ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡುತ್ತವೆ. ಇದಲ್ಲದೆ, ಅಶೋಕಪುರಂನಲ್ಲಿ ಮುಂಗಡ ಟಿಕೆಟಿಂಗ್ ವ್ಯವಸ್ಥೆ ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಅಳವಡಿಸುವುದು ಈ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತವೆ ಮತ್ತು ಮೈಸೂರು ಜಂಕ್ಷನ್‌ ನಲ್ಲಿನ ಹೊರೆಯನ್ನು ಕಡಿಮೆ ಮಾಡುತ್ತವೆ.  

ಈ ಮಹತ್ವದ ನಿಲ್ದಾಣ ಮರುರೂಪಿಸುವ ಉಪಕ್ರಮವನ್ನು ಒಟ್ಟು ₹ 32.5 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಇದರಲ್ಲಿ ₹ 22 ಕೋಟಿಗಳನ್ನು ಸಂಚಾರ ಸೌಲಭ್ಯಗಳ ಉನ್ನತ್ತೀಕರಣಕ್ಕೆ ಮತ್ತು ₹ 10.5 ಕೋಟಿ ಪ್ರಯಾಣಿಕರ ಸೌಕರ್ಯಗಳನ್ನು ವೃದ್ಧಿಸಲು ಉಪಯೋಗ ಮಾಡಲಾಗಿದೆ.

ಮೂಲತಃ ಮೂರು ಪ್ಲಾಟ್‌ ಫಾರ್ಮ್‌ ಗಳು, ಮೂರು ಚಾಲನೆಯಲ್ಲಿರುವ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್‌ ಗಳನ್ನು ಹೊಂದಿರುವ ಅಶೋಕಪುರಂ ರೈಲ್ವೆ ನಿಲ್ದಾಣವು ಮೈಸೂರು ನಗರ ರೈಲು ನಿಲ್ದಾಣದಿಂದ ಕೇವಲ 5.2 ಕಿಮೀ ದೂರದಲ್ಲಿದ್ದೂ, ಮೈಸೂರಿಗೆ ನಿರ್ಣಾಯಕವಾದ ಎರಡನೇ ನಿಲ್ದಾಣವಾಗಿ ಅಭಿವೃದ್ಧಿಗೊಂಡಿದೆ.

ಅಶೋಕಪುರಂ ನಿಲ್ದಾಣವು ವ್ಯಾಪಕವಾದ ಪುನರಾಭಿವೃದ್ಧಿಯ ನಂತರ ತನ್ನ ಮೂಲಸೌಕರ್ಯವನ್ನು ವಿಸ್ತರಿಸಿಕೊಂಡು, ಈಗ ಐದು ಚಾಲನೆಯಲ್ಲಿರುವ ಹಳಿಮಾರ್ಗಗಳು, ಐದು ಪ್ಲಾಟ್‌ಫಾರ್ಮ್‌ಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್‌ ಗಳನ್ನು ಒಳಗೊಂಡಿದೆ.

ಇತರ ಪ್ರಮುಖ ಅಭಿವೃದ್ಧಿ ಕಾರ್ಯಗಳು  

1. ಚಾಮರಾಜನಗರದ ಕಡೆಗೆ ಈಗ ಅಸ್ತಿತ್ವದಲ್ಲಿರುವ 4 ಮತ್ತು 5ನೆಯ ಮಾರ್ಗಗಳಿಗೆ ಸಂಪರ್ಕ.

2. ಸಂಪೂರ್ಣ ಉದ್ದದ ಸ್ಟೇಬ್ಲಿಂಗ್ ಲೈನ್‌ (ಮಾರ್ಗ 7) ರ ಸೇರ್ಪಡೆ

3. ಎರಡು ಹೊಸ ಪ್ಲಾಟ್‌ಫಾರ್ಮ್‌ಗಳ ಸೇರ್ಪಡೆ: PF No.4 & PF No.5.

4. ಪಂಪಾಪತಿ ರಸ್ತೆಯ ಕಡೆಗೆ 2ನೇ ಪ್ರವೇಶ ಕಟ್ಟಡದ ಸ್ಥಾಪನೆ.

5. ಪ್ರವೇಶ-1 ಮತ್ತು ಪ್ರವೇಶ-2 ಅನ್ನು ಸುಲಭವಾಗಿ ಸಂಪರ್ಕಿಸಲು ಪಾದಾಚಾರಿ ಸೇತುವೆ (ಎಫ್‌ಒಬಿ) ವಿಸ್ತರಣೆ.

6. Rd.4 & 5 ಮತ್ತು Rd.6 & 7 ಪ್ಲಾಟ್ ಫಾರ್ಮ್ ಗಳಲ್ಲಿ ಕೋಚ್ ಗೆ ನೀರು ತುಂಬುವ ಸೌಲಭ್ಯಗಳ ಸ್ಥಾಪನೆ.

7. ಹೊಸ 2ನೇ ಪ್ರವೇಶದ ಕಡೆಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ನಿಲ್ದಾಣ ಸೌಲಭ್ಯ ಒದಗಿಸುವಿಕೆ.

ಹಲವಾರು ಪ್ರಯೋಜನ:

ಮೈಸೂರಿಗೆ ಜೊತೆಯಾಗಿ ರೈಲು ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸಲು ಎರಡೂ ನಿಲ್ದಾಣಗಳು ಒಟ್ಟಾರೆಯಾಗಿ 11 ಪ್ಲಾಟ್‌ ಫಾರ್ಮ್‌ ಗಳನ್ನು ಹೊಂದಿಲಿವೆ ಮತ್ತು ಇದು ಮೈಸೂರು ಯಾರ್ಡ್‌ನಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಿ ಎರಡನೇ ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲಿದೆ.

ಹೆಚ್ಚುವರಿಯಾಗಿ, ಪೂರ್ಣ ಪ್ರಮಾಣದ ಪ್ಲಾಟ್‌ಫಾರ್ಮ್ ಮೇಲ್ಚಾವಣಿಗಳನ್ನು ಹೊಂದಿರುವ PF ನಂ.4 ಮತ್ತು 5 ಮತ್ತು ಪೂರ್ಣ ಪ್ರಮಾಣದ  ಮೇಲ್ಚಾವಣಿಯೊಂದಿಗೆ ಹೊಸದಾಗಿ ಕಟ್ಟಿರುವ ಪ್ಲಾಟ್‌ಫಾರ್ಮ್ ನಂ.6 ಅನ್ನು ಸ್ಥಾಪಿಸಿರುವುದು ಸೇರಿದಂತೆ ₹7.24 ಕೋಟಿ ಮೌಲ್ಯದಲ್ಲಿ ಮಂಜೂರಾದ ಕಾಮಗಾರಿಗಳು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವಲ್ಲಿ ಬಹಳ ದೂರ ಸಾಗುತ್ತವೆ.

RELATED ARTICLES
- Advertisment -
Google search engine

Most Popular