Friday, April 4, 2025
Google search engine

Homeರಾಜ್ಯಬೆಂಗಳೂರಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ ಉದ್ಘಾಟನೆ

ಬೆಂಗಳೂರಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ ಉದ್ಘಾಟನೆ

ಬೆಂಗಳೂರು: ಇನ್ಮುಂದೆ ಅಮೆರಿಕದ ವೀಸಾ ಪಡೆಯಲು ರಾಜ್ಯದ ಜನತೆ ಸೇರಿದಂತೆ ಬೆಂಗಳೂರಿಗರು ಚೆನ್ನೈ, ಹೈದರಾಬಾದ್‌ಗೆ ಹೋಗಬೇಕಿಲ್ಲ, ಇದೀಗ ಬೆಂಗಳೂರಿನಲ್ಲೇ ಪಡೆಯಬಹುದು. ಬೆಂಗಳೂರಿನಲ್ಲೇ ಅಮೆರಿಕ ಕಾನ್ಸುಲೇಟ್‌ ಅಧಿಕೃತವಾಗಿ ಆರಂಭವಾಗಿದ್ದು ಇಂದು (ಜ.17) ಉದ್ಘಾಟನೆಗೊಂಡಿದೆ.

ಡಿಸಿಎಂ ಡಿಕೆ ಶಿವಕುಮಾರ್‌, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಭಾರತದಲ್ಲಿರುವ ಅಮರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಾತ್ಕಾಲಿಕ ದೂತವಾಸ ಕಚೇರಿಯನ್ನು ಉದ್ಘಾಟಿಸಿದರು. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮಾರಿಯೆಟ್ ಹೋಟೆಲ್‌ನಲ್ಲಿ ತಾತ್ಕಾಲಿಕ ದೂತಾವಾಸ ಕಚೇರಿ ಕಾರ್ಯಾರಂಭಿಸಿದೆ.

ಮುಂದಿನ ದಿನದಲ್ಲಿ ನಗರದ ಪ್ರಮುಖ ಭಾಗದಲ್ಲಿ ಶಾಶ್ವತ ಕಚೇರಿ ಸ್ಥಾಪಿಸಲಾಗುವುದು. ಇಲ್ಲಿಯವರೆಗೆ ಚೆನ್ನೈ, ಹೈದರಾಬಾದ್, ಮುಂಬೈ, ಕೋಲ್ಕತ್ತಾಗಳಲ್ಲಿ ಅಮೆರಿಕದ ದೂತಾವಾಸ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇನ್ನು ಮುಂದೆ ಅಮೆರಿಕಕ್ಕೆ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕೆ ಹೋಗುವವರಿಗೆ ಇಲ್ಲೇ ವೀಸಾ ಸಿಗಲಿದೆ ಎಂದು ವಿದೇಶ ಸಚಿವ ಜೈಶಂಕರ್‌ ಹೇಳಿದ್ದಾರೆ.

ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದರಾದ ತೇಜಸ್ವಿಸೂರ್ಯ, ಪಿ ಸಿ ಮೋಹನ್, ಡಾ ಮಂಜುನಾಥ್, ಐಟಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular