ಮಂಡ್ಯ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಹಿನ್ನಲೆ ಮಂಡ್ಯದಲ್ಲೂ ಡೆಂಗ್ಯೂ ಪ್ರಕರಣ ಅಧಿಕವಾಗಿದ್ದು, ಎರಡು ತಿಂಗಳಲ್ಲಿ 180ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ.
ಮಂಡ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲರ್ಟ್ ಆಗಿದೆ.
ಡೆಂಗ್ಯೂ ಪ್ರಕರಣ ಏರಿಕೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 1450 ಡೆಂಗ್ಯೂ ಪ್ರಕರಣಗಳ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 180 ಪ್ರಕರಣಗಳು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ.
ಎಲ್ಲರಿಗೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಯಾವುದೇ ಡೆತ್ ಆಗಿಲ್ಲ. ಡೆಂಗ್ಯೂ ಪ್ರಕರಣಗಳ ತಡೆಯಲು ಆರೋಗ್ಯ ಇಲಾಖೆಯಿಂದ ಗ್ರಾಮ ಸರ್ವೆ ಮಾಡಲಾಗಿದೆ. ನೀರು ನಿಂತ ಜಾಗಗಳಲ್ಲಿ ಶುಚಿತ್ವ ಕಾಪಾಡಲು ಸೂಚನೆ ನೀಡಲಾಗಿದೆ.
ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಲಾರ್ವ ಪತ್ತೆಯಾಗಿದೆ. ಮನೆಯ ಅಕ್ಕ-ಪಕ್ಕ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಫ್ರೀಡ್ಜ್,ಟ್ಯಾಂಕ್, ತೊಟ್ಟಿ ಸೇರಿ ಹಲವು ಸಾಮಾಗ್ರಿಗಳನ್ನು ಶುಚಿಯಾಗಿಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಸೊಳ್ಳೆ ನಿರ್ಮೂಲನೆ ಮಾಡಲು ಗ್ರಾಮದಲ್ಲಿ ಅರಿವು ಕಾರ್ಯ ನಡೆಸಿದ್ದು, ತುಂಬಾ ದಿನ ನೀರು ನಿಲ್ಲದೆ ಹಾಗೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
ಡೆಂಗ್ಯೂ ರೋಗ ಲಕ್ಷಣಗಳು, ಜ್ವರ, ಕಣ್ಣಿನ ಒಳ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಹಳ್ಳಿಗಳಲ್ಲಿ ರಕ್ತ ಪರೀಕ್ಷೆ ಮೂಲಕ ಡೆಂಗ್ಯೂ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಡೆಂಗ್ಯೂ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.
ನಿರ್ಲಕ್ಷ್ಯ ತೋರಿದೆ ಎಚ್ಚರಿಕೆ ವಹಿಸಲು ಡಿಎಚ್ಓ ಡಾ.ಮೋಹನ್ ಮನವಿ ಮಾಡಿದ್ದಾರೆ.