Saturday, April 19, 2025
Google search engine

Homeರಾಜ್ಯಮೈಸೂರು ದಸರಾ ವಸ್ತು ಪ್ರದರ್ಶನದ ಪ್ರವೇಶ ಶುಲ್ಕ ಹೆಚ್ಚಳ

ಮೈಸೂರು ದಸರಾ ವಸ್ತು ಪ್ರದರ್ಶನದ ಪ್ರವೇಶ ಶುಲ್ಕ ಹೆಚ್ಚಳ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲೇ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಈ ವಸ್ತು ಪ್ರದರ್ಶನದಲ್ಲಿ ಭಾಗಿಯಾಗುವಂತ ಪ್ರವಾಸಿಗರಿಗೆ ಬಿಗ್ ಶಾಕ್ ಎನ್ನುವಂತೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸುದ್ದಿಗೋಷ್ಠಿ ಮಾತನಾಡಿ, ಅ. ೩ ರಂದು ದಸರಾ ವಸ್ತು ಪ್ರದರ್ಶನ ರಾತ್ರಿ ೮ ಗಂಟೆಗೆ ಉದ್ಘಾಟನೆ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸ್ಥಳೀಯ ಜನಪ್ರನಿಧಿಗಳು, ಅಧಿಕಾರಗಳ ಸಮ್ಮುಖದಲ್ಲಿ ಉದ್ಘಾಟನೆ ಆಗಲಿದೆ. ಸುಮಾರು ೯೦ ದಿನಗಳ ಕಾಲ ವಸ್ತು ಪ್ರದರ್ಶನವಿರುತ್ತದೆ ಎಂದಿದ್ದಾರೆ.

ಉದ್ಘಾಟನೆಗೂ ಮುನ್ನವೇ ಸರ್ಕಾರಿ ಮಳಿಗೆಗಳು ಭರ್ತಿಯಾಗುವಂತೆ ಸೂಚಿಸಲಾಗಿದೆ. ಈಗಾಗಲೇ ೩೦ ಕ್ಕೂ ಹೆಚ್ಚು ಮಳಿಗೆಗಳು ತುಂಬಿವೆ. ಉಳಿದಂತೆ ಎಲ್ಲಾ ಖಾಸಗಿ ಮಳಿಗೆಗಳೂ ಕೂಡ ಅಂದೇ ಉದ್ಘಾಟನೆ ಆಗಲಿವೆ. ಬ್ರಾಂಡ್ ಮೈಸೂರು ಹೆಸರಿನಡಿ ಮೈಸೂರು ಬ್ರಾಂಡ್ ಪ್ರಾಡಕ್ಟ್ ಗಳೆಲ್ಲವೂ ಒಂದೇ ಸೂರಿನಡಿ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನ ಮಾಡಲಾಗುತ್ತದೆ. ಪ್ರಾಯೋಜಕರಿಂದ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ಪಡೆದು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದರು.

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಈ ಬಾರಿ ಒಟ್ಟು ೧೫೩ ಖಾಸಗಿ ಮಳಿಗೆಗಳು ಮತ್ತು ೩೩ ಸರ್ಕಾರಿ ಮಳಿಗೆಗಳನ್ನು ತೆರೆಯಲಾಗಿದೆ. ಈ ಬಾರಿ ಪ್ರವೇಶ ಶುಲ್ಕವನ್ನು ಕೇವಲ ೫ ರೂಪಾಯಿ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ ೩೦ ರೂಪಾಯಿ ಇದ್ದದ್ದನ್ನು ೩೫ ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಕ್ಕಳ ಪ್ರವೇಶ ದರ ಹಿಂದಿನ ವರ್ಷದಷ್ಟೇ ಇರುತ್ತದೆ. ಸಕಲ ರೀತಿಯಲ್ಲೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಹೇಳಿದರು.

RELATED ARTICLES
- Advertisment -
Google search engine

Most Popular