ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಕೆಆರ್ ಎಸ್ ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು ಹೆಚ್ಚಳವಾಗಿದೆ.
44 ಕ್ಯೂಸೆಕ್ ಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದೇ ರಾತ್ರಿಯಲ್ಲಿ 3 ಅಡಿ ನೀರು ಶೇಖರಣೆಯಾಗಿದೆ. ಕೆಆರ್ ಎಸ್ ಡ್ಯಾಂನ ನೀರಿನ ಮಟ್ಟ 116 ಅಡಿ ದಾಟಿದೆ.
ಇದೇ ರೀತಿ ಒಳ ಹರಿವಿನ ಪ್ರಮಾಣ ಬಂದರೆ ಒಂದೇ ವಾರದಲ್ಲಿ ಡ್ಯಾಂ ಭರ್ತಿ ಸಾಧ್ಯತೆ ಇದೆ.
ಪುನರ್ವಸು ಮಳೆಗೆ ಈ ಬಾರೀ ಬಹುತೇಕ ಡ್ಯಾಂ ಭರ್ತಿ ಸಾಧ್ಯತೆ ಇದೆ.
KRS ಡ್ಯಾಂನ ಇಂದಿನ ನೀರಿನ ಮಟ್ಟ.
ಗರಿಷ್ಠ ಮಟ್ಟ 124.80 ಅಡಿ.
ಇಂದಿನ ಮಟ್ಟ 116.60 ಅಡಿ.
ಗರಿಷ್ಠ ಸಾಂದ್ರತೆ 49.453 ಟಿಎಂಸಿ.
ಇಂದಿನ ಸಾಂದ್ರತೆ 38.900 ಟಿಎಂಸಿ.
ಒಳ ಹರಿವು 44,617 ಕ್ಯೂಸೆಕ್.
ಹೊರ ಹರಿವು 2,566 ಕ್ಯೂಸೆಕ್.