ಬಳ್ಳಾರಿ : ಕರ್ನಾಟಕ ಆಂದ್ರ, ತೆಲಂಗಾಣ. ಮೂರು ರಾಜ್ಯಗಳ ಹತ್ತಾರು ಜಿಲ್ಲೆಗಳ ಜೀವನಾಡಿ ತುಂಗಭದ್ರ ಜಲಾಶಯ.
ಮುಖ್ಯವಾಗಿ, ಬಳ್ಳಾರಿ ವಿಜಯನಗರ, ರಾಯಚೂರು ಕೊಪ್ಪಳ ಜಿಲ್ಲೆಗಳ ಅನ್ನದಾತನಿಗೆ ತುಂಗಭದ್ರೆಯೆ ಆಧಾರ. ಆದ್ರೆ,ಈ ಬಾರಿ, ಮುಂಗಾರು ಮಳೆ ವಾತವರಣಕ್ಕೆ ತಂಪೆರದಂತಾದ್ರು, ರೈತರಿಗೆ ಕಣ್ಣಿರಾಗಿತ್ತು.
ಆದ್ರೆ, ಮಲೆನಾಡು ಬಾಗದಲ್ಲಿ ಸುರಿದ ಮಳೆಗೆ, ಜಿಲ್ಲೆಯ ತುಂಗಭದ್ರ ಜಲಾಶಯಕ್ಕೆ ದಿನೆ ದಿನೇ, ಹರಿದು ಬರುತ್ತಿರುವ ನೀರಿನ ಪ್ರಮಾಣ, ಹೆಚ್ಚಾಗುತ್ತಿದ್ದು.
ರೈತರಲ್ಲಿ ಮಂದಹಾಸ ಮೂಡಿಸಿದೆ. ಜಲಾಶಯ 131 ಟಿಎಮ್ ಸಿ ನೀರಿನ ಸಂಗ್ರಹಣಾ ಸಾಮರ್ಥ್ಯವಿದ್ದು, 30 ಟಿಎಮ್ ಸಿ ಗಾತ್ರದಲ್ಲಿ ಹೂಳು ತುಂಬಿದೆ. ಸದ್ಯ ಇದೀಗ, ಜಲಾಶಯದಲ್ಲಿ 46ಕ್ಕು ಹೆಚ್ಚು ಟಿಎಮ್ ಸಿ ನೀರು ಸಂಗ್ರಹವಾಗಿದೆ.
1ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಒಳ ಹರಿವು ಬರುತ್ತಿದ್ದು. ಇದೇ ಪ್ರಮಾಣದಲ್ಲಿ ಒಂದುವಾರಗಳ ಒಳ ಹರಿವು ಬಂದಲ್ಲಿ ತುಂಗಭದ್ರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.