ಗುಂಡ್ಲುಪೇಟೆ: ಗ್ರಾಪಂಗಳಲ್ಲಿ ಕಂದಾಯ ವಸೂಲಾತಿ, ಈ-ಸ್ವತ್ತು, ಸಾಗುವಳಿ ಪತ್ರವನ್ನು ಸಕಾಲದಲ್ಲಿ ನೀಡಿದರೆ ಆದಾಯ ಹೆಚ್ಚಾಗುತ್ತದೆ. ಇದು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ತಾಲೂಕಿನ ಮೂಖಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಹಳ್ಳಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಯೋಜನೆ ಅನುದಾನದಡಿ ಮಡಹಳ್ಳಿ ಗ್ರಾಮದ ಎಸ್ಸಿ ಸಮುದಾಯ ಹಾಗೂ ತೆಂಕಲಹುಂಡಿ ಗ್ರಾಮದ ಎಸ್ಟಿ ಸಮುದಾಯದವರಿಗೆ ಶಾಮಿಯಾನ ಮತ್ತು ಇತರೆ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಗ್ರಾಪಂಗಳಲ್ಲಿ ವಸೂಲಾತಿಗೆ ಸಾಕಷ್ಟು ಮೂಲಗಳಿದೆ. ಅವುಗಳಲ್ಲಿ ಸಮರ್ಪಕವಾಗಿ ಮಾಡಿದರೆ ಮೂಲ ಸೌಕರ್ಯ ಸೇರಿದಂತೆ ಇನ್ನಿತರ ಹಲವು ಸೌಲಭ್ಯಗಳನ್ನು ಅದರಿಂದಲೇ ನೀಡಬಹುದು. ಪುರಸಭೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಸಾಕಷ್ಟು ಕಾನೂನು ತೊಡಕುಗಳಿವೆ. ಇವುಗಳ ನಿವಾರಣೆಗೆ ಸರ್ಕಾರದ ಗಮನ ಸೆಳೆಯಳಾಗಿದ್ದು, ಸಮಸ್ಯೆ ಬಗೆಹರಿದರೆ ಪುರಭೆಗೆ ಸಾಕಷ್ಟು ಆದಾಯ ಬರುತ್ತದೆ ಎಂದು ಎಂದರು.
ಗ್ರಾಪಂ ವತಿಯಿಂದ ಶಾಮಿಯಾನ ಹಾಗೂ ಚೇರ್ ಗಳಲ್ಲಿ ನೀಡಿರುವುದು ಉತ್ತಮ ಸಂಗತಿಯಾಗಿದೆ. ಗ್ರಾಮದಲ್ಲಿ ಕಾರ್ಯಕ್ರಮ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಿ. ಮೂಖಹಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಸ್ವಯಂ ಪ್ರೇರಿತ ಗ್ರಾಪಂ ವತಿಯಿಂದ ಗ್ರಾಮದ ಜನರಿಗೆ ಉಪಯೋವಾಗಲಿ ಎಂಬ ಉದ್ದೇಶದಿಂದ ಶಾಮಿಯಾನ ಹಾಗೂ ಚೇರ್ ನೀಡಿದ್ಧಾರೆ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ಗ್ರಾಪಂಗಳಿಗೂ ವಿಸ್ತರಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಓ ಶ್ರೀಕಂಠರಾಜೇ ಅರಸ್, ಪಿಡಿಓ ಪ್ರಸಾದ್, ಗ್ರಾಪಂ ಅಧ್ಯಕ್ಷ ಮಹದೇವಚಾರಿ, ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಶಿವಮೂರ್ತಿ, ಪ್ರವೀಣ್, ನರಸಿಂಹ, ಕಾರ್ಯದರ್ಶಿ ಸತೀಶ್ ಸೇರಿದಂತೆ ಮಡಹಳ್ಳಿ ಮತ್ತು ತೆಂಕಲಹುಂಡಿ ಗ್ರಾಮಸ್ಥರು ಹಾಜರಿದ್ದರು.