ಮದ್ದೂರು: ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮೌನ ಪ್ರತಿಭಟನೆಯನ್ನು ರಾಜ್ಯಾದ್ಯಂತ ಹಿಂದಿನಿಂದ ಆರಂಭಿಸಿದ್ದು, ಸರ್ಕಾರ ಹೆಚ್ಚಿನ ಕೆಲಸ ಒತ್ತಡವನ್ನು ಹಾಕುವ ಮೂಲಕ ಒತ್ತಡಕ್ಕೆ ಸಿಲುಕಿಸುತ್ತಿದೆ ಹಾಗೂ ತಂದೆ- ತಾಯಿ, ಹೆಂಡತಿ- ಮಕ್ಕಳುಬೇರೆಡೆಇದ್ದು ನಮಗೆ ವರ್ಗಾವಣೆ ಹೇಳುತ್ತಿಲ್ಲ ಕುಟುಂಬದವರನ್ನು ಬಿಟ್ಟು ಬಂದು ವರ್ಷಾನುಗಟ್ಟಲೆ ದೂರದಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಗ್ರಾಮ ಲೆಕ್ಕಗಳಿಗೆ ಕಚೇರಿ ನೀಡಿ ಕಂಪ್ಯೂಟರ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಕೆಲಸ ಮಾಡಿ ಎಂದರೆ ಮಾಡಬಹುದು ಯಾವುದೇ ಮೂಲ ಸೌಕರ್ಯವಿಲ್ಲದೆ ಮೊಬೈಲ್ ಗಳ ಮೂಲಕ ಕೆಲಸ ನಿರ್ವಹಿಸಲು ಕಷ್ಟವಾಗಿದೆ.
ಆಧಾರ್ ಸೀಡ್,ಗರುಡ ಆಪ್ತ, ಪೌತಿ ಆಂದೋಲನ ಆಪ್, ಬೆಳೆ ಸಮೀಕ್ಷೆ, ಕೃಷಿ ಗಣತಿ ,ದಿಸಾಕ್, ಸೇರಿದಂತೆ ಸುಮಾರು 21 ನೀಡಲಾಗಿದ್ದು ನಮಗೆ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಗುರಾಮ ಲಕ್ಕಿಗರ ಸಂಘದ ತಾಲೂಕು ಅಧ್ಯಕ್ಷ ನಿಂಗೆ ನೀಗೆಗೌಡ ಆರೋಪಿಸಿ ಕೈಗೆ ಕಪ್ಪುಬಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಉಪಾಧ್ಯಕ್ಷ ಪ್ರಮೋದ್, ಕಾರ್ಯದರ್ಶಿ ನಾಗು, ಮೋಹನ್, ರವಿ, ಚನ್ನಬಸಪ್ಪ, ಪುಟ್ಟ, ಸೇರಿದಂತೆ ಗ್ರಾಮ ಸಹಾಯಕರು ಭಾಗವಹಿಸಿದ್ದರು.