ಕೊಳ್ಳೆಗಾಲ : ಕೊಳ್ಳೇಗಾಲ ತಾಲೂಕು ಗುಂಡಲ್ ಜಲಾಶಯದ, ಹಳೆಸ್ಥಿರ ಹಚ್ಚುಕಟ್ಟು ವ್ಯಾಪ್ತಿಯ, ರೈತರ ಹಿತ ರಕ್ಷಣಾ ಸಂಘದವರಿಂದ ವಿವಿಧ ಬೇಡಿಕೆಗಳಿಗಾಗಿ ನಗರಸಭೆ ಮುಂಭಾಗ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಮಾಡಲಾಗುತ್ತಿದೆ. ರೈತರ ಹಿತ ರಕ್ಷಣಾ ಸಂಘದ ಅಧ್ಯಕ್ಷರಾದ ಬಸವರಾಜ್ ಅವರು ಮಾತನಾಡಿ ಕೊಳ್ಳೆಗಾಲ ನಗರಸಭೆ ವ್ಯಾಪ್ತಿಯ ಗುಂಡಾಲ್ ಜಲಾಶಯದ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳು, ರೈತರ ತರಿ ಜಮೀನು, ಕಾಲುವೆಗಳ ಒತ್ತುವರಿ ಮಾಡಿಕೊಳ್ಳಲಾಗಿದೆ.
ಕಾವೇರಿ ನದಿಗೆ ಗಲೀಜು ನೀರು ಮತ್ತು ಯುಜಿಡಿ ನೀರು ಬಿಡುತ್ತಿದ್ದಾರೆ ಇದನ್ನು ತಡೆಗಟ್ಟಬೇಕು
ಸರ್ಕಾರಿ ಆಸ್ತಿಗಳಿಗೂ, ಕೆರೆಗಳಿಗೂ ಅಕ್ರಮವಾಗಿ ಇ- ಸ್ವತ್ತನ್ನು ಮಾಡಿಕೊಟ್ಟಿದ್ದಾರೆ ಸಾಮಾನ್ಯ ಜನರು ಇ ಸ್ವತ್ತನ್ನು ಮಾಡಿಸಿಕೊಳ್ಳಲು ಕಚೇರಿಗೆ ಬಂದರೆ ಇ-ಸ್ವತ್ತನ್ನು ಮಾಡಿಕೊಳ್ಳುವುದಿಲ್ಲ, ಇದರ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು, ಜಿಲ್ಲಾಧಿಕಾರಿಗಳ ಆದೇಶದಂತೆ ಬೆಂಗಳೂರಿಂದ ತನಿಕಾ ತಂಡ ಬಂದು ತನಿಖೆ ಮಾಡಿ ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕು ಅಲ್ಲಿವರೆಗೂ ನಾವು ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ರೈತರ ಹಿತ ರಕ್ಷಣಾ ಸಂಘದ ಅಧ್ಯಕ್ಷ ಬಸವರಾಜ್ ರವರು ತಿಳಿಸಿದರು.
ಧರಣಿಯಲ್ಲಿ ರೈತರ ಹಿತ ರಕ್ಷಣಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.