ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ : ಗಾಂಧಿ ತಂದ ಸ್ವಾತಂತ್ರ ಮತ್ತು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಮ್ಮ ದೇಶದ ಹೆಮ್ಮೆಯ ಸಂಗತಿಗಳು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆದ 78 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅದೆಷ್ಟೋ ಮಂದಿ ಸ್ವತಂತ್ರಕ್ಕಾಗಿ ದುಡಿದಿದ್ದಾರೆ ಅಲ್ಲದೇ ಮಡಿದಿದ್ದಾರೆ, ಅವರ ಶ್ರಮಕ್ಕೆ ಕುಂದು ಬಾರದ ರೀತಿ ನಡೆದುಕೊಂಡು ಹೋಗಬೇಕು, ಯುವಕರು ದೇಶ ರಕ್ಷಣೆಯ ಕೆಲಸಗಳಿಗೆ ತೊಡಗಿಕೊಳ್ಳಬೇಕು ಎಂದರು.
ಎಚ್.ಡಿ. ಕೋಟೆ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿತ್ತು, ಈಗ ಅಭಿವೃದ್ಧಿ ಹೊಂದಿದ ತಾಲ್ಲೂಕಾಗಿದ್ದು, ಇದಕ್ಕಾಗಿ ತಂದೆಯವರ ಶ್ರಮದ ಮತ್ತು ನಾನು ಸಹ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ‘ಸುಮಾರು 200 ವರ್ಷಗಳ ಬ್ರಿಟೀಷ್ ಆಳ್ವಿಕೆಯಿಂದ ವಿಮುಕ್ತಿ ಹೊಂದಿದ ಈ ದಿನವನ್ನು ಸ್ವತಂತ್ರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ದಿನಕ್ಕಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನು ತೆತ್ತಿದ್ದು, ಮತ್ತೆ ವಿದೇಶಿಗರ ಆಕ್ರಮಣಕ್ಕೆ ಒಳಗಾಗದ ರೀತಿ ಇಂದಿನ ಯುವ ಜನತೆ ಗಮನಹರಿಸಬೇಕು’ ಎಂದರು.
ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಹೇಶ್‌ರವರು ಸ್ವತಂತ್ರ ದಿನಾಚರಣೆಯ ಮಹತ್ವ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ವತಿಯಿಂದ ವಿಶೇಷ ಚೇತನರಿಗೆ ವ್ಹೀಲ್ ಛೇರ್, ಕಂಕಳು ಗುಜ್ಜು, ವಾಟರ್ ಬೆಡ್, ತೋಟಗಾರಿಕೆ ಇಲಾಖೆಯಿಂದ ಐದು ಮಂದಿ ತಾಳೆ ಬೆಳೆ ಬೆಳೆಯುವ ರೈತರಿಗೆ ತಾಳೆ ಗಿಡ ವಿತರಿಸಲಾಯಿತು.

ಆದರ್ಶ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಅಬೂಬ್‌ರವರಿಗೆ ಮಾಜಿ ಶಾಸಕ ದಿ. ಚಿಕ್ಕಮಾದುರವರ ಹೆಸರಿನಲ್ಲಿ 20 ಸಾವಿರ ರೂ ಚೆಕ್ ಅನ್ನು ಶಾಸಕ ಅನಿಲ್ ಚಿಕ್ಕಮಾದು ವಿತರಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನ್ನಡ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ಉಪನಿರ್ದೇಶಕರ ಕಚೇರಿಯಿಂದ ಲ್ಯಾಪ್‌ಟಾಪ್ ಗಳನ್ನು ವಿತರಿಸಿದರು.
ಸೈನಿಕರಾಗಿ ಸೇವೆ ಸಲ್ಲಿಸಿ ತಾಲ್ಲೂಕು ದಂಡಾಧಿಕಾರಿಯಾಗಿರುವ ಶ್ರೀನಿವಾಸ್ ಮತ್ತು ಇನ್ಸ್‌ಪೆಕ್ಟರ್ ಆಗಿರುವ ಶಬ್ಬೀರ್ ಹುಸೇನ್ ರವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಭಿನಂಧಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರಾದ ಪ್ರಮೋದ್(ಕ್ರೀಡೆ), ವಸಂತ(ಶಿಕ್ಷಣ), ಬಸಮ್ಮ(ಆರೋಗ್ಯ ಇಲಾಖೆ), ಪ್ರಕಾಶ್(ಸೈನಿಕ), ಯೋಗೇಶ್, ಆನಂದ(ಪೊಲೀಸ್ ಇಲಾಖೆ), ಚೇತನ್, ನಂಜಪ್ಪ, ಯೋಗೇಂದ್ರಕುಮಾರ್(ಕಂದಾಯ ಇಲಾಖೆ), ಸುರೇಶ್ ರವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆ, ವಿಶ್ವಭಾರತಿ ಎಜುಕೇಷನ್ ಟ್ರಸ್ಟ್, ಅಂಗನವಾಡಿ ಶಾಲಾ ಮಕ್ಕಳು, ಸೇಂಟ್ ಮೇರಿಸ್ ಕಾನ್ವೆಟ್, ಆದರ್ಶ ಶಾಲೆ, ಸರ್ಕಾರಿ ಬಾಲಕೀಯರ ಪ್ರೌಢಶಾಲೆ ಸೇರಿದಂತೆ ವಿವಿಧ 7 ಶಾಲೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಥಮ ಬಹುಮಾನವನ್ನು ಆದಿಚುಂಚನಗಿರಿ ವಿದ್ಯಾಸಂಸ್ಥೆ ಮತ್ತು ದ್ವಿತೀಯ ಬಹುಮಾನವನ್ನು ಆದರ್ಶ ವಿದ್ಯಾಲಯ ಪಡೆದವು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ಧರಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಸ್ವಾಮಿ, ಟಿಎಚ್‌ಓ ರವಿಕುಮಾರ್, ಗೋಪಾಲಕೃಷ್ಣ, ಡಿ.ವೈ.ಎಸ್.ಪಿ ಗೋಪಾಲಕೃಷ್ಣ, ಎಇಇ ರಾಮೇಗೌಡ, ಸಿಡಿಪಿಓ ಆಶಾ, ಹಿಂದುಳಿದ ವರ್ಗಗಳ ಇಲಾಖೆಯ ಸಹಾಉಕ ನಿರ್ದೇಶಕಿ ಶಶಿಕಲಾ, ಕೃಷ್ಣಮೂರ್ತಿ, ಮಹದೇವಯ್ಯ, ಕೆ.ಇ.ಬಿ. ಚಂದುಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮಯ್ಯ, ಇನ್ಸ್‌ಫೆಕ್ಟರ್ ಶಬ್ಬೀರ್ ಹುಸೇನ್, ಪಶು ವೈದ್ಯಾಧಿಕಾರಿ ಪ್ರಸನ್ನ, ಗ್ರೇಡ್ 2 ತಹಸೀಲ್ದಾರ್ ಪ್ರಸನ್ನ, ಮುಖಂಡರಾದ ಮೊತ್ತ ಬಸವರಾಜಪ್ಪ, ಹೆಚ್.ಸಿ. ನರಸಿಂಹಮೂರ್ತಿ, ಬಿ. ನಂದೀಶ್ ಮಾದಾಪುರ, ಮಂಜು ಬೀಚನಹಳ್ಳಿ, ಕನ್ನಡಪ್ರಮೋದ್, ಪುಟ್ಟಬಸವ, ಗಂಗರಾಜು, ದಾಕ್ಷಾಯಿಣಿ ಬಸವರಾಜು, ಈರೇಗೌಡ, ಕಾವೇರ, ಬಿ. ಬಸವರಾಜು, ಮಹದೇವನಾಯಕ, ಎ.ಎಸ್. ಮಹದೇವ ಇದ್ದರು.