ಮಂಗಳೂರು:ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ 78 ನೇ ವರ್ಷದ ಸ್ವಾತಂತ್ರೋತ್ಸವ ಮತ್ತು ವಿದ್ಯಾರ್ಥಿ ಪರಿಷತ್ ಪ್ರಮಾಣ ವಚನ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಧ್ವಜಾರೋಹಣ ಮಾಡಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅಥಿತಿ ಮಾಜಿ ಸೈನಿಕರೂ ತುಳುನಾಡು ಮಾಜಿ ಸೈನಿಕರ ಸಂಘದ ಬಂಟ್ವಾಳ ತಾಲ್ಲೂಕು, ಇದರ ಅಧ್ಯಕ್ಷರಾದ ಎ.ವಿ ಗೌಡ ರವರು ಮಾತನಾಡಿ ಮಕ್ಕಳಿಗೆ ಕಾರ್ಗಿಲ್ ಯುದ್ದ ಮತ್ತು ಇತರೆ ಸಂಧರ್ಭದಲ್ಲಿ ಭಾರತೀಯ ಸೇನೆಯ ಕಾರ್ಯಪ್ರವೃತ್ತಿಯನ್ನು ವಿವರಿಸಿ ಜನಪ್ರಿಯ ಶಾಲೆಯ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಯಶಸ್ವೀ ಭಾರತೀಯರಾಗಿ ಮೂಡಿ ಬರಲಿ ಎಂದು ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರಿದರು.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಮತ್ತು ನೃತ್, ಭಾಷಣ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ನೆರೆದವರ ಗಮನ ಸೆಳೆದರು.
ವಿದ್ಯಾರ್ಥಿ ಪರಿಷತ್ ಪ್ರಮಾಣ ವಚನ ಕಾರ್ಯಕ್ರಮ:
ಸ್ವಾತಂತ್ರ್ಯೋತ್ಸವ ಆಚರಣೆಯೊಂದಿಗೆ ಇತ್ತೇಚೆಗೆ ಶಾಲೆಯ ವಿದ್ಯಾರ್ಥಿ ಪರಿಷತ್ ಸಮಿತಿಗೆ ಆಯ್ಕೆಯಾಗಿರುವ ಮಕ್ಕಳಿಗೆ ಪ್ರಮಾಣ ವಚನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಮಕ್ಕಳಿಗೆ ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ರವರು ಪ್ರಮಾಣ ವಚನವನ್ನು ಬೋಧಿಸಿ ಬ್ಯಾಡ್ಜ್ ಧರಿಸಿಕೊಟ್ಟರು. ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಒಲಂಪಿಯಾಡ್ ಪರೀಕ್ಷೆಯಲ್ಲಿ ರಾಂಕ್ ನೊಂದಿಗೆ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಶಾಲೆಯ ನಿರ್ದೇಶಕರಾಗಿರುವ ನೌಶೀನ್ ಬದ್ರಿಯಾ, ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ನಿರೂಪಣೆ, ಸ್ವಾಗತ, ಧನ್ಯವಾದ ಎಲ್ಲವನ್ನೂ ವಿದ್ಯಾರ್ಥಿಗಳೇ ನಿರ್ವಹಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುವಂತಿತ್ತು.