ಪಿರಿಯಾಪಟ್ಟಣ : ವ್ಯಾಪಾರಕ್ಕೆ ಬಂದ ಬ್ರಿಟಿಷರು ಭಾರತದಲ್ಲಿದ್ದ ಸಂಪತ್ತನ್ನು ಕಂಡು ಅಕ್ರಮವಾಗಿ ವಶಪಡಿಸಿಕೊಂಡು ಭಾರತೀಯರನ್ನು ಗುಲಾಮಗಿರಿಗೆ ದುಡಿದರು ಎಂದು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರವಿಚಂದ್ರ ತಿಳಿಸಿದರು.
ಸಿ ಎಸ್ ಐ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು
1947 ರಿಂದ ಬ್ರಿಟಿಷ್ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀರನ್ನು ಗೌರವಿಸುತ್ತ ಬಂದಿದ್ದು , ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದ್ದು ಮಕ್ಕಳು ಶಾಲೆಗಳಲ್ಲಿ ಇತಿಹಾಸಕಾರರ ಪಾಠಗಳನ್ನು ಓದಿ ಅವರ ಗುಣಗಳನ್ನು ಅಳವಡಿಸಿಕೊಂಡು.
ಶಾಲಾ ಸಭೆಗಳು, ಸ್ಪರ್ಧೆಗಳು ಅಥವಾ ಯಾವುದೇ ಇತರ ತರಗತಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಲು ಸಹಾಯ ಮಾಡಲು ವಿವಿಧ ಪಾಠ ಕಲಿಯಲು ಸುಲಭ ಮತ್ತು ಆಸಕ್ತಿದಾಯಕ ಸ್ವಾತಂತ್ರ್ಯ ದಿನದ ರಾಷ್ಟ್ರೀಯ ಕಾರ್ಯಕ್ರಮ ಮನೆ ಮನೆಯ ಹಬ್ಬದಂತೆ ವಿದ್ಯಾರ್ಥಿಗಳು ಆಚರಿಸಬೇಕು ಎಂದರು.
ಸಮಾರಂಭದ ಎಸ್ ಟಿ ಎಂ ಸಿ ಅಧ್ಯಕ್ಷ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯ ಶೃತಿ ಮುಖ್ಯ ಶಿಕ್ಷಕರಾದ ಶಿಲ್ಪ ಮುಖಂಡರಾದ ಕಾಂತರಾಜು, ಗಿರೀಶ್, ರವಿ, ಸತೀಶ ಶಿಕ್ಷಕರಾದ ನಿಧಿ, ಮನೋಜ್ ಇದ್ದರು. ನಂತರ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಾಯಿತು.