ಇಂಡೊ-ಆಸೀಸ್ ನಡುವಣ ಟಿ20 ಸರಣಿಯು ಇಂದು ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಮ್ಯಾಚ್ ಕ್ಯಾನ್ಬೆರಾದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಮೆಲ್ಬೋರ್ನ್ನಲ್ಲಿ ಜರುಗಲಿದೆ. 3ನೇ ಪಂದ್ಯ ಹೋಬಾರ್ಟ್ನಲ್ಲಿ ಆಡಲಾಗುತ್ತದೆ. ಹಾಗೆಯೇ ಕೊನೆಯ ಎರಡು ಪಂದ್ಯಗಳಿಗೆ ಕ್ಯಾರರಾ ಹಾಗೂ ಬ್ರಿಸ್ಬೇನ್ ಆತಿಥ್ಯವಹಿಸಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಅ.29) ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಮೂಲಕ ಐದು ಮ್ಯಾಚ್ಗಳ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯ ಮೂಲಕ 9 ಆಟಗಾರರು ಚೊಚ್ಚಲ ಬಾರಿ ಕಣಕ್ಕಿಳಿಯುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಅಂದರೆ ಟೀಮ್ ಇಂಡಿಯಾದಲ್ಲಿರುವ 9 ಆಟಗಾರರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟಿ20 ಪಂದ್ಯವಾಡಲು ಸಜ್ಜಾಗಿದ್ದಾರೆ. ಇವರಲ್ಲಿ ಇಂದು ಯಾರಿಗೆ ಅವಕಾಶ ಸಿಗಲಿದೆ ಎಂಬುದೇ ಈಗ ಕುತೂಹಲ. ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟಿ20 ಪಂದ್ಯವಾಡಲು ಅವಕಾಶವನ್ನು ಎದುರು ನೋಡುತ್ತಿರುವ ಆಟಗಾರರು ಯಾರೆಂದರೆ….
ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಇದೇ ಮೊದಲ ಬಾರಿಗೆ ಆಸೀಸ್ ಪಿಚ್‌ನಲ್ಲಿ ಟಿ20 ಪಂದ್ಯವಾಡಲು ಸಜ್ಜಾಗಿದ್ದಾರೆ. ಹಾಗೆಯೇ ಭಾರತ ತಂಡದ ಸ್ಫೋಟಕ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಕೂಡ ಕಾಂಗರೂನಾಡಿನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ.
ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ಗಳಾಗಿ ಸ್ಥಾನ ಪಡೆದಿರುವ ನಿತೀಶ್ ಕುಮಾರ್ ರೆಡ್ಡಿ ಹಾಗೂ ಶಿವಂ ದುಬೆ ಕೂಡ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟಿ20 ಪಂದ್ಯವಾಡುವುದನ್ನು ಎದುರು ನೋಡುತ್ತಿದ್ದಾರೆ. ಅಂದರೆ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾ ಭಾಗವಾಗಿರುವ ದುಬೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ.
ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಹಾಗೂ ಜಿತೇಶ್ ಶರ್ಮಾಗೂ ಇದು ಮೊದಲ ಆಸ್ಟ್ರೇಲಿಯಾ ಪ್ರವಾಸ. ಹೀಗಾಗಿ ಈ ನಾಲ್ವರೂ ಕೂಡ ಕಾಂಗರೂನಾಡಿನಲ್ಲಿ ಚೊಚ್ಚಲ ಟಿ20 ಪಂದ್ಯವಾಡುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಈ ಬಾರಿಯ ಸರಣಿಯ ಮೂಲಕ ಯಾರೆಲ್ಲಾ ಆಸೀಸ್ ಪಿಚ್‌ನಲ್ಲಿ ತಮ್ಮ ಇನಿಂಗ್ಸ್ ಖಾತೆ ತೆರೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.



