Saturday, April 12, 2025
Google search engine

Homeಕ್ರೀಡೆಬಾಂಗ್ಲಾದೇಶ ತಂಡವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ

ಬಾಂಗ್ಲಾದೇಶ ತಂಡವನ್ನು ಮಣಿಸಿ ಏಷ್ಯಾಕಪ್ ಗೆದ್ದ ಭಾರತ

ಹಾಂಗ್​ ಕಾಂಗ್ ​ನಲ್ಲಿ ನಡೆದ ಮಹಿಳೆಯರ ಉದಯೋನ್ಮುಖ ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 31 ರನ್ ​ಗಳಿಂದ ಮಣಿಸಿದ ಭಾರತ ತಂಡ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಅತ್ಯುತ್ತಮ ರನ್ ರೇಟ್ ಹೊಂದಿದ್ದ ಭಾರತ ಸೀದಾ ಫೈನಲ್​ಗೆ ಎಂಟ್ರಿಕೊಟ್ಟಿತ್ತು. ಇತ್ತ ಸೆಮಿಫೈನಲ್​ನಲ್ಲಿ ಪಾಕ್ ತಂಡವನ್ನು ಮಣಿಸಿದ್ದ ಬಾಂಗ್ಲಾ ಫೈನಲ್ ​ಗೆ ಟಿಕೆಟ್ ಖಚಿತಪಡಿಸಿಕೊಂಡಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 127 ರನ್ ಕಲೆ ಹಾಕಿತು. ತಂಡದ ಪರ ದಿನೇಶ್ ವೃಂದಾ 29 ಎಸೆತಗಳಲ್ಲಿ 36 ರನ್ ಸಿಡಿಸಿ ಭಾರತದ ಪರ ಗರಿಷ್ಠ ಸ್ಕೋರ್ ಎನಿಸಿಕೊಂಡರೆ, ಕನಿಕಾ ಅಹುಜಾ 23 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು.

ಇನ್ನು ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕನ್ನಡತಿ ಶ್ರೇಯಾಂಕ ಪಾಟೀಲ್, ಮನ್ನತ್ ಕಶ್ಯಪ್ ಹಾಗೂ ಕನಿಕಾ ಅಹುಜಾ ಅವರ ದಾಳಿಗೆ ನಲುಗಿ ಕೇವಲ 96 ರನ್​ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ತಂಡದ ಪರ 17 ರನ್ ಬಾರಿಸಿದ ನಹಿದಾ ಅಖ್ತರ್ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸೋಭಾನ ಮೊಸ್ತರಿ 16 ರನ್ ಸಿಡಿಸಿದರು.

ಟೀಂ ಇಂಡಿಯಾ ಪರ ಬೌಲಿಂಗ್​ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ 4 ಓವರ್ ​ಗಳ ಖೋಟಾದಲ್ಲಿ ಕೇವಲ 13 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದರು. ಈ ಹಿಂದೆ ಶ್ರೇಯಾಂಕ ಈ ಟೂರ್ನಿಯ ಲೀಗ್ ಹಂತದಲ್ಲಿ ಭಾರತ, ಹಾಂಗ್​ ಕಾಂಗ್ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಕೇವಲ 2 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು.

ಶ್ರೇಯಾಂಕ ಪಾಟೀಲ್ ಜೊತೆಗೆ ಮನ್ನತ್ ಕಶ್ಯಪ್ ಕೂಡ ಶ್ರೇಷ್ಠ ಪ್ರದರ್ಶನ ನೀಡಿದರು. ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಕಶ್ಯಪ್, 20 ರನ್ ನೀಡಿ 3 ವಿಕೆಟ್ ಪಡೆದರು.

ಹಾಗೆಯೇ ಮಹಿಳಾ ಪ್ರಿಮಿಯರ್ ಲೀಗ್​ ನಲ್ಲಿ ಆರ್ ​ಸಿಬಿ ಪರ ಕಣಕ್ಕಿಳಿಯುವ ಕನಿಕಾ ಅಹುಜಾ ಕೂಡ 4 ಓವರ್ ಬೌಲ್ ಮಾಡಿ ಇದರಲ್ಲಿ 23 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.

ಇನ್ನೊಂದು ವಿಚಿತ್ರ ಸಂಗತಿಯೆಂದರೆ ಭಾರತ ಈ ಲೀಗ್​ನಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಒಂದು ಹಾಂಗ್​ ಕಾಂಗ್ ವಿರುದ್ಧದ ಆರಂಭಿಕ ಪಂದ್ಯವನ್ನಾಡಿದ್ದ ಭಾರತ ಇದೀಗ ಫೈನಲ್​ ನಲ್ಲಿ ಬಾಂಗ್ಲಾ ತಂಡವನ್ನು ಎದುರಿಸಿತು. ಇನ್ನುಳಿದಂತೆ ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಸೇರಿದಂತೆ ಭಾರತದ ಇತರ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು.

RELATED ARTICLES
- Advertisment -
Google search engine

Most Popular