ನವದೆಹಲಿ : ವರದಿಯ ಪ್ರಕಾರ ಭಾರತದ ರಾಜಧಾನಿ ದೆಹಲಿಯು ಮತ್ತೊಮ್ಮೆ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡಿದೆ. ಹಾಗೆಯೇ ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ. ಆದರೆ ಐಕ್ಯೂಆರ್ ಸಂಸ್ಥೆ ೨೦೨೨ರಲ್ಲಿ ನೀಡಿದ್ದ ವರದಿಯಲ್ಲಿ ಬೇಗುಸರಾಯ್ ಯಾವುದೇ ಸ್ಥಾನವನ್ನು ಪಡೆದಿರಲಿಲ್ಲ.
ಸ್ವಿಸ್ ಸಂಸ್ಥೆ Iಕಿಂiಡಿನ ವಿಶ್ವ ವಾಯು ಗುಣಮಟ್ಟ ವರದಿ ೨೦೨೩ ಪ್ರಕಾರ ಬಾಂಗ್ಲಾದೇಶದಲ್ಲಿರುವ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ ೭೯.೯ ಮೈಕ್ರೋಗ್ರಾಂಗಳಷ್ಟು ಪಿಎಂ ಪ್ರಮಾಣ ಕಂಡು ಬಂದಿದ್ದು, ಪಾಕಿಸ್ತಾನದಲ್ಲಿ ೭೩.೭ ಮೈಕ್ರೋಗ್ರಾಂಗಳಷ್ಟು ಪಿಎಂ ಕಂಡು ಬಂದಿದೆ. ಭಾರತದಲ್ಲಿನ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ ೫೩.೩ ಮೈಕ್ರೋಗ್ರಾಂಗಳಷ್ಟು ಪಿಎಂ ಪ್ರಮಾಣವನ್ನು ಗುರುತಿಸಲಾಗಿದ್ದು ಭಾರತ ವಿಶ್ವದಲ್ಲೇ ಮೂರನೇ ಅತೀ ಕಲುಷಿತ ದೇಶವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ಅತ್ಯಂತ ಉತ್ತಮ ವಾಯುಗುಣ ಪಿಎಂ ಪ್ರಮಾಣ ೨.೫ ಮೈಕ್ರೋಗ್ರಾಮ್ ಆಗಿದೆ. ಭಾರತದಲ್ಲಿ ಶೇಕಡ ೬೬ರಷ್ಟು ನಗರಗಳು ಸರಾಸರಿ ೩೫ ಮೈಕ್ರೋಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿದೆ.