Monday, May 12, 2025
Google search engine

HomeUncategorizedರಾಷ್ಟ್ರೀಯಭಾರತ–ಪಾಕಿಸ್ತಾನ ಡಿಜಿಎಂಒ ಸಭೆ: ಮಹತ್ವದ ಚರ್ಚೆಗೆ ವೇದಿಕೆ

ಭಾರತ–ಪಾಕಿಸ್ತಾನ ಡಿಜಿಎಂಒ ಸಭೆ: ಮಹತ್ವದ ಚರ್ಚೆಗೆ ವೇದಿಕೆ

ನವದೆಹಲಿ: ನವದೆಹಲಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒ) ಸಭೆ ನಡೆಯಲಿದೆ. ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿರುವ ಭಾರತ ಡಿಜಿಎಂಒ ಮತ್ತು ಮೇಜರ್ ಜನರಲ್ ಹುದ್ದೆಯಲ್ಲಿರುವ ಪಾಕ್ ಡಿಜಿಎಂಒ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎಪ್ರಿಲ್ 10ರಂದು ಅಮೆರಿಕದ ಮಧ್ಯಸ್ಥಿಕೆಯಿಂದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರೂ ಪಾಕಿಸ್ತಾನ ಮುಂದುವರಿದ ದಾಳಿಗಳು, ವಿಶೇಷವಾಗಿ ಡ್ರೋಣ್ ದಾಳಿ, ಆತಂಕ ಉಂಟುಮಾಡಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಮತ್ತೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿತು. ನಿನ್ನೆಯಿಂದ ಪಾಕ್ ದಾಳಿ ನಿಂತಿದ್ದು, ಇಂದಿನ ಸಭೆಯಲ್ಲಿ ಇನ್ನುಮುಂದಿನ ನಡೆಯ ಕುರಿತು ಭಾರತ ನಿರ್ಧಾರ ತೆಗೆದುಕೊಳ್ಳಲಿದೆ. ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ.

RELATED ARTICLES
- Advertisment -
Google search engine

Most Popular