Tuesday, April 8, 2025
Google search engine

Homeಸ್ಥಳೀಯಭಾರತ- ಪಾಕಿಸ್ತಾನ ಪಂದ್ಯ: ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಭಾರತ- ಪಾಕಿಸ್ತಾನ ಪಂದ್ಯ: ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳಿಂದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸಲಿ ಎಂದು ಪ್ರಾರ್ಥಿಸಿ ಕ್ರಿಕೆಟ್ ಪ್ರೇಮಿಗಳು 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭಾರತದ ಆಟಗಾರರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ತ್ರಿವಣ ಧ್ವಜ ಹಿಡಿದು ಭಾರತದ ತಂಡಕ್ಕೆ ಶುಭವಾಗಲಿ ಎಂದು ಜೈಕಾರ ಕೂಗಿ ಶುಭ ಹಾರೈಸಿದರು.

ಹಿಂದೆ ಪಾಕಿಸ್ತಾನ ವಿರುದ್ಧ ಸರಣಿ ಜಯಗಳಿಸಿದ್ದು, ಇಂದು ನಡೆಯುವ ಪಂದ್ಯಾವಳಿಯಲ್ಲೂ ಸಹ ಭಾರತದ ತಂಡ ವಿಜಯಶಾಲಿಯಾಗಲಿದೆ. ಭಾರತದ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕ್ರಿಕೆಟ್ ಪ್ರೇಮಿ ಲೋಹಿತ್ ವಿಶ್ವಾಸ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಶಿವರಾಜ್, ನವೀನ್ ಬಲರಾಮ್,  ನಾಗರಾಜ್, ಮಂಜುನಾಥ್ ಮನೋಹರ್, ಕಿರಣ್ ವಿಷ್ಣು ರಘು ಹಾಗೂ ಇನ್ನಿತರ ಕ್ರಿಕೆಟ್ ಪ್ರೇಮಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular