ಚಾಮರಾಜನಗರ: ಈ ವಿಶ್ವಕಪ್ ನಲ್ಲಿ ಭಾರತ ಗೆದ್ದೇ ಗೆಲ್ಲಲ್ಲಿದೆ, ಎಲ್ಲಾ ಕ್ರಿಕೆಟಿಗರು ಗೆಲುವಿನ ಉತ್ಸಾಹದಲ್ಲಿದ್ದಾರೆ ಎಂದು ಶಾಸಕ ಮಂಜುನಾಥ್ ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಐಪಿಎಲ್ ಬಂದ ನಂತರ ಪ್ರತಿಭಾವಂತರಿಗೆ ಅವಕಾಶ ಸಿಕ್ಕಿದೆ, ಉತ್ತಮ ಆಟಗಾರರಿಂದ ಟೀಂ ಇಂಡಿಯಾ ರೂಪುಗೊಂಡಿದೆ, ವಿಶ್ವಕಪ್ ಗೆಲ್ಲುವ ಎಲ್ಲಾ ಲಕ್ಷಣವೂ ಈ ಬಾರಿ ಭಾರತಕ್ಕಿದೆ ಎಂದರು.
ಈಗಾಗಲೇ ಬಲಿಷ್ಠ ತಂಡಗಳನ್ನು ಸೋಲಿಸಿಕೊಂಡು ಭಾರತ ಬಂದಿದ್ದು ಆಸ್ಟ್ರೇಲಿಯಾವನ್ನು ಕೂಡ ಸೋಲಿಸಲಿದೆ, ಇಡೀ ಪ್ರಪಂಚದಲ್ಲಿ ಭಾರತ ಕ್ರಿಕೆಟ್ ತಂಡ ಹೆಸರು ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.