ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಚಿತ್ರರಂಗ ಅದರೊಂದಿಗೆ ನಂಟು ಕಡಿತಗೊಳಿಸುತ್ತಿದೆ. ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಭಾರತೀಯ ನಿರ್ಮಾಪಕರಿಗೆ ಪತ್ರ ಬರೆದು, ಟರ್ಕಿ ಹಾಗೂ ಅಜರ್‌ಬೈಜಾನ್‌ನಲ್ಲಿ ಶೂಟಿಂಗ್ ಮಾಡದಂತೆ ಸೂಚಿಸಿದೆ.
“ಸಿನಿಮಾಗಿಂತ ರಾಷ್ಟ್ರ ಪ್ರಮುಖ. ಟರ್ಕಿಯೊಂದಿಗೆ ಸಂಬಂಧ ಬೆಳೆಸುವುದು ಭದ್ರತೆಗೆ ಹಾನಿಕಾರಕ,” ಎಂದು ಪತ್ರದಲ್ಲಿ ಹೇಳಲಾಗಿದೆ. ಈಗಾಗಲೇ ಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರಿಗೆ ನಿಷೇಧ ಹೇರಲಾಗಿದೆ.
ಟರ್ಕಿ ಪಾಕಿಸ್ತಾನಕ್ಕೆ 350 ಡ್ರೋನ್‌ಗಳನ್ನು ಒದಗಿಸಿ, ತರಬೇತಿ, ಯಂತ್ರೋಪಕರಣಗಳಲ್ಲಿ ಸಹಾಯ ನೀಡಿದ್ದು ಬಹಿರಂಗವಾಗಿದೆ. ಡ್ರೋನ್ ದಾಳಿಗೆ ಟರ್ಕಿಯ ಸೇನೆ ಸಹಕಾರ ನೀಡಿದ್ದು, ಇಬ್ಬರು ಟರ್ಕಿ ಸೇನಿಕರು ಸಾವನ್ನಪ್ಪಿದ್ದಾರೆ. ‘ಅಸಿಸ್ಗಾರ್ಡ್ ಸೊಂಗರ್’, ‘ಬೇರಕ್ತಾರ್ ಟಿಬಿ2’, ಮತ್ತು ‘ಯಿಹಾ’ ಡ್ರೋನ್‌ಗಳನ್ನು ಬಳಸಿ ಪಾಕ್ ದಾಳಿ ನಡೆಸಿದ ವರದಿಗಳು ಲಭ್ಯವಾಗಿದ್ದು, ಟರ್ಕಿ ಸೈನಿಕ ಸಲಹೆಗಾರರು ಉಗ್ರ ದಾಳಿ ಸ್ಥಳಗಳನ್ನೂ ಪಾಕ್‌ಗೆ ಸೂಚಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.