Tuesday, April 8, 2025
Google search engine

Homeಕ್ರೀಡೆಇಂಟರ್‌ ಕಾಂಟಿನೆಂಟಲ್ ಕಪ್ ಗೆದ್ದ ಭಾರತ ಫುಟ್ಬಾಲ್ ತಂಡ..!

ಇಂಟರ್‌ ಕಾಂಟಿನೆಂಟಲ್ ಕಪ್ ಗೆದ್ದ ಭಾರತ ಫುಟ್ಬಾಲ್ ತಂಡ..!

ಭಾನುವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲೆಬನಾನ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ ಭಾರತ ಪುರುಷರ ಫುಟ್ಬಾಲ್ ತಂಡ ಐದು ವರ್ಷಗಳ ನಂತರ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯನ್ನು ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಭಾರತದ ಪರ ನಾಯಕ ಸುನಿಲ್ ಛೆಟ್ರಿ ಮೊದಲ ಗೋಲು ದಾಖಲಿಸಿದರು. ನಂತರ ಲಾಲಿಯಾಂಜುಲಾ ಚಾಂಗಟೆ ಎರಡನೇ ಗೋಲು ಗಳಿಸಿದರು. ಇದಕ್ಕುತ್ತರವಾಗಿ ಎದುರಾಳಿ ಒಂದೇ ಒಂದು ಗೋಲು ಗಳಿಸಲಿಲ್ಲ. ಇದರೊಂದಿಗೆ ಭಾರತ ಫುಟ್ಬಾಲ್ ತಂಡ ಎರಡನೇ ಬಾರಿಗೆ ಇಂಟರ್ಕಾಂಟಿನೆಂಟಲ್ ಕಪ್ ಗೆದ್ದ ಸಾಧನೆ ಮಾಡಿದೆ.

ಭಾರತ ಫುಟ್ಬಾಲ್ ತಂಡವು 2018 ರಲ್ಲಿ ಕೊನೆಯ ಬಾರಿಗೆ ಈ ಪಂದ್ಯಾವಳಿಯನ್ನು ಗೆದ್ದಿತ್ತು. ಆ ಬಳಿಕ 2019 ರಲ್ಲಿ, ಉತ್ತರ ಕೊರಿಯಾ ತಂಡವು ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆ ವರ್ಷ ಭಾರತ ಕಳಪೆ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

2019 ರ ನಂತರ, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗಲಿಲ್ಲ. ಇದು ಇಂಟರ್‌ಕಾಂಟಿನೆಂಟಲ್ ಕಪ್‌ನ ಮೂರನೇ ಆವೃತ್ತಿಯಾಗಿದ್ದು, ಭಾರತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೂರು ಆವೃತ್ತಿಗಳಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಫುಟ್ಬಾಲ್ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಚಾಂಪಿಯನ್ ತಂಡಕ್ಕೆ 1 ಕೋಟಿ ರೂ. ಬಹುಮಾನ ಘೋಷಿಸಿದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಪಂದ್ಯದ ಆರಂಭದಿಂದಲೂ ಭಾರತದ ಆಟಗಾರರು ಪ್ರಾಬಲ್ಯ ಮೆರೆದರೂ ಗೋಲು ಗಳಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಅಂತಿಮ ಪಂದ್ಯದ ಮೊದಲಾರ್ಧ ಗೋಲು ರಹಿತವಾಗಿತ್ತು.

ಸಕ್ರಿಯ ಆಟಗಾರರ ಪೈಕಿ ಮೂರನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ ಛೆಟ್ರಿ ದ್ವಿತೀಯಾರ್ಧದ ಆರಂಭದಲ್ಲಿ ಗೋಲು ಬಾರಿಸಿದರೆ, ಗೋಲಿಗೆ ನೆರವಾದ ಚಾಂಗ್ಟ್ 66ನೇ ನಿಮಿಷದಲ್ಲಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಇದಾದ ನಂತರ ಉಭಯ ತಂಡಗಳು ಹೆಚ್ಚಿನ ಪ್ರಯತ್ನ ಮಾಡಿದರೂ ಗೋಲು ಗಳಿಸಲು ವಿಫಲವಾದವು.

RELATED ARTICLES
- Advertisment -
Google search engine

Most Popular