ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಕ್ಯಾಬ್ ಚಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
21 ವರ್ಷದ ಯುವತಿ ಮೇಲೆ 35ರ ಸಿಮ್ರಂಜಿತ್ ಸಿಂಗ್ ಸೆಖೋನ್ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಥೌಸಂಡ್ ಓಕ್ಸ್ ಬಾರ್‌ನಿಂದ ಯುವತಿ ಕ್ಯಾಮರಿಲ್ಲೊದಲ್ಲಿರುವ ಆಕೆಯ ಮನೆಗೆ ಕ್ಯಾಬ್‌ನಲ್ಲಿ ಹೊರಟಿದ್ದಳು. ಯುವತಿ ತುಂಬಾ ಕುಡಿದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುವತಿ ನಿದ್ರೆಗೆ ಜಾರಿದ್ದಾಳೆ. ಪ್ರಯಾಣ ಪೂರ್ಣಗೊಂಡಿದ್ದರೂ ಚಾಲಕ ಕ್ಯಾಬ್ ನಿಲ್ಲಿಸಿಲ್ಲ. ಚಾಲನೆ ಮುಂದುವರಿಸಿದ್ದಾನೆ. ಈ ನಡುವೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಲಾಯಿತು. ನಾನು ತಪ್ಪಿತಸ್ಥನಲ್ಲ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಜಾಮೀನಿಗೆ 4,51,40,275 ಕೋಟಿ ರೂ. ನಿಗದಿಪಡಿಸಲಾಗಿದೆ. ಮುಂದಿನ ವಿಚಾರಣೆಯನ್ನು ಡಿ.29ಕ್ಕೆ ನಿಗದಿಪಡಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಮತ್ತು ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವುದು ಸೇರಿದಂತೆ ಹಲವಾರು ಕಾರಣಗಳಿಗಾಗಿ ಅಮೆರಿಕ, ಕೆನಡಾದಲ್ಲಿ ಭಾರತೀಯ ಮೂಲದ ಚಾಲಕರು ಟೀಕೆಗೆ ಗುರಿಯಾಗುತ್ತಿರುವ ಹೊತ್ತಿನಲ್ಲೇ ಈ ಸುದ್ದಿ ಬಂದಿದೆ.



