Sunday, April 20, 2025
Google search engine

Homeರಾಜ್ಯಸುದ್ದಿಜಾಲಭಾರತೀಯ ರೆಡ್‍ಕ್ರಾಸ್: ಚಿತ್ರದುರ್ಗ ಜಿಲ್ಲಾ ಶಾಖೆಗೆ ಬೆಸ್ಟ್ ಡಿಸ್ಟಿಕ್ ಅವಾರ್ಡ್

ಭಾರತೀಯ ರೆಡ್‍ಕ್ರಾಸ್: ಚಿತ್ರದುರ್ಗ ಜಿಲ್ಲಾ ಶಾಖೆಗೆ ಬೆಸ್ಟ್ ಡಿಸ್ಟಿಕ್ ಅವಾರ್ಡ್

ಚಿತ್ರದುರ್ಗ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆ 2020-21ರಲ್ಲಿ ಕೋವಿಡ್ ಸಮಯದಲ್ಲಿ ಮಾಡಿದ ಅತ್ಯುತ್ತಮ ಸೇವೆ ಪರಿಗಣಿಸಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯು ಚಿತ್ರದುರ್ಗ ಜಿಲ್ಲಾ ಶಾಖೆಗೆ ಬೆಸ್ಟ್ ಡಿಸ್ಟಿಕ್ ಅವಾರ್ಡ್ ನೀಡಿದೆ.

ಬೆಂಗಳೂರಿನ ರಾಜ ಭವನದಲ್ಲಿ ನಡೆದ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯಪಾಲರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಅಧ್ಯಕ್ಷರಾದ ಥಾವರಚಂದ್ ಗೆಹಲೊಟ್ ಅವರು ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ಅರುಣ್ ಕುಮಾರ್, ರಾಜ್ಯ ಆಡಳಿತ ಮಂಡಳಿ ಸದಸ್ಯ ಮಧು ಪ್ರಸಾದ್, ಮಾಜಿ ಸದಸ್ಯೆ ಗಾಯತ್ರಿ ಶಿವರಾಂ, ಗಿರೀಶ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular