Sunday, April 20, 2025
Google search engine

Homeರಾಜ್ಯಭಾರತೀಯರು ಅಂಬೇಡ್ಕರ್ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ : ಪ್ರೊ. ಡಿ. ಆನಂದ್

ಭಾರತೀಯರು ಅಂಬೇಡ್ಕರ್ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ : ಪ್ರೊ. ಡಿ. ಆನಂದ್

ಮೈಸೂರು: ವಿಶ್ವಸಂಸ್ಥೆ ಅಂಬೇಡ್ಕರ್ ಹುಟ್ಟಿದ ದಿನವನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿದ್ದಾರೆ. ಆದರೆ ಭಾರತೀಯರು ಇಂದಿಗೂ ಅಂಬೇಡ್ಕರ್‌ರವರನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಬಿ.ಎನ್. ಬಹದ್ದೂರ್ ವಾಣಿಜ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಡಿ. ಆನಂದ್ ತಿಳಿಸಿದರು.

ಮೈಸೂರಿನ ಕೆಸರೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಸರ್ಕಾರಿ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ನಾವು ದ್ವಂದ್ವದಲ್ಲಿ ಬದುಕುತ್ತಿದ್ದೇವೆ. ಇಂದು ದ್ವೇಷ, ಅಸೂಯೆ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದೇವೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಓದುವ ಮಕ್ಕಳು ಬಡವರ ಮಕ್ಕಳು ನಿಮ್ಮ ತಂದೆ ತಾಯಿಯವರು ನನ್ನ ಮಗ ಏನಾದರೂ ಸಾಧನೆ ಮಾಡುತ್ತಾನೆ ಎಂದು ಕನಸು ಕಾಣುತ್ತಿರುತ್ತಾರೆ ಅವರನ್ನು ನಿರಾಶಾರನ್ನಾಗಿ ಮಾಡಬೇಡಿ. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಇಟ್ಟುಕೊಂಡು ಹಠಛಲದಿಂದ ಓದಿ ಸಾಧನೆ ಮಾಡಿ ಅಲ್ಪತೃಪ್ತರಾಗಬೇಡಿ. ಜ್ಞಾನವನ್ನು ಆಸ್ತಿ ಮಾಡಿಕೊಳ್ಳಿರಿ. ಅಂಬೇಡ್ಕರ್ ಜಗತ್ತಿನ ಜ್ಞಾನದ ಸಂಕೇತ. ಜಗತ್ತು ಕಂಡ ಶ್ರೇಷ್ಠ ಚಿಂತಕರಾಗಿದ್ದರು. ಮೀಸಲಾತಿಯನ್ನು ನಂಬಿಕೊಂಡು ನಾವು ಹೆಚ್ಚು ಕಾಲ ಬದುಕಲು ಆಗುವುದಿಲ್ಲ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆದುಕೊಂಡು ಜ್ಞಾನವನ್ನು ವೃದ್ಧಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಿರಿ ಎಂದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ದೊಡ್ಡಯ್ಯ ಮಾತನಾಡಿ ವಿದ್ಯಾರ್ಥಿಗಳು ಉತ್ತಮವಾದ ಇಂಗ್ಲೀಷ್ ಭಾಷೆ ಕಲಿತು, ಕನ್ನಡವನ್ನು ಸ್ಪಷ್ಟವಾಗಿ ಬರೆದು ಮಾತನಾಡಿ. ಕೌಶಲ್ಯ ತರಬೇತಿಗಳನ್ನು ಪಡೆದು ಬದುಕಿಗಾಗಿ ವಿದ್ಯೆಕಲಿಯಿರಿ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿರಿ. ಸಂಘಟಿತರಾಗಿ ಹಕ್ಕುಗಳನ್ನು ಪಡೆಯಿರಿ. ಅಂಬೇಡ್ಕರ್‌ರವರನ್ನು ಪೂಜಿಸಿ ಗೌರವಿಸಿ. ಅವರ ಆದರ್ಶಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ.

ಸಮಾರಂಭದಲ್ಲಿ ಅಧ್ಯಾಪಕ ಸೋಮಶೇಖರ್, ಸಮಾಜಸೇವಕ ಅಜೀಜುಲ್ಲಾ (ಅಜ್ಜು) ಮಾತನಾಡಿದರು. ನಗರಪಾಲಿಕೆ ಮಾಜಿ ಸದಸ್ಯ ಸಮೀವುಲ್ಲಾ ಅಜ್ಜು, ಸಹಾಯಕ ನಿರ್ದೇಶಕ ಸಿದ್ದಲಿಂಗು, ನಿಲಯ ಪಾಲಕರಾದ ಕಾರ್ತಿಕ್ ಆರ್., ಪ್ರದೀಪ್‌ಕುಮಾರ್, ಮಹೇಶ್, ವಸಂತ್‌ಕುಮಾರಿ, ಜಗದೀಶ್, ಶಿವಮಲ್ಲಯ್ಯ, ದೊಡ್ಡಹೆಜ್ಜೂರು ದಿಲೀಪ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

RELATED ARTICLES
- Advertisment -
Google search engine

Most Popular